18 ವರ್ಷದ ಯುವಕನನ್ನು ಆತನ ಸ್ನೇಹಿತರೇ ಕೊಲೆಗೈದ ಘಟನೆಯು ದಕ್ಷಿಣ ದೆಹಲಿಯ ಸಂಗಮ್ ವಿಹಾರದಲ್ಲಿ ನಡೆದಿದೆ. ಕೊಲೆಗಾರರು ಯುವಕನನ್ನು ಕೊಲೆ ಮಾಡುವ ಮುನ್ನ ಕೋಮು ನಿಂದನೆ ಮಾಡಿದ್ದಾರೆ ಎಂದು ಮೃತ ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ.
ಅಂಧ ಭಿಕ್ಷುಕನ ಬಳಿ 65 ಸಾವಿರ ರೂ. ಮುಖಬೆಲೆಯ ಅಮಾನ್ಯೀಕರಣಗೊಂಡ ನೋಟು…!
ಆದರೆ ಈ ಹೇಳಿಕೆಯನ್ನು ತಳ್ಳಿ ಹಾಕಿರುವ ಪೊಲೀಸರು ಹಣದ ವಿಚಾರದಲ್ಲಿ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಹೇಳಿದ್ದಾರೆ. ಬಲ್ಲ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಯುವತಿಯ ಕಾರಣಕ್ಕೆ ಈ ಕೊಲೆ ನಡೆದಿದೆ ಎನ್ನಲಾಗಿದೆ. ಯುವಕನನ್ನು ಕೊಲೆ ಮಾಡಿದವರೆಲ್ಲರೂ ಆತನ ಸ್ನೇಹಿತರು ಎನ್ನಲಾಗಿದೆ. ಆದರೆ ಕೊಲೆಗೆ ನಿಖರವಾದ ಕಾರಣ ಏನು ಎಂಬುವುದು ಇನ್ನೂ ನಿಗೂಢವಾಗಿದೆ. ಕೊಲೆಯ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೇಶದ ಜನತೆಗೆ ಮೋದಿ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ: ಒಂದೇ ಕಡೆ ಸಿಗಲಿದೆ ಎಲ್ಲಾ ದಾಖಲೆ
ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಸ್ಥಳೀಯರು ಪ್ರಕರಣ ನಡೆದ ಸ್ಥಳದಲ್ಲೇ ಇದ್ದರೂ ಸಹ ಯಾರೊಬ್ಬರೂ ಯುವಕನ ರಕ್ಷಣೆಗೆ ಬಂದಿಲ್ಲದೇ ಇರೋದನ್ನು ಕಾಣಬಹುದಾಗಿದೆ. ಮೃತ ಯುವಕನನ್ನು ಇಮ್ರಾನ್ ಎಂದು ಗುರುತಿಸಲಾಗಿದೆ. ಈತ ಸಂಗಮ್ ವಿಹಾರದ ನಿವಾಸಿಯಾಗಿದ್ದು ದೆಹಲಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ.
ಕೊಲೆಯ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ತಲುಪುವ ವೇಳೆಗೆ ಇಮ್ರಾನ್ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಕೂಡಲೇ ಆತನನ್ನು ಏಮ್ಸ್ಗೆ ದಾಖಲು ಮಾಡಲಾಯ್ತಾದರೂ ಯಾವುದೇ ಪ್ರಯೋಜನವಾಗಿಲ್ಲ.