alex Certify BIG NEWS: ಕಾಂಗ್ರೆಸ್ ನಿಂದ ಮಹಾವಲಸೆ, ಬರೋಬ್ಬರಿ 170 ಶಾಸಕರು ಜಂಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾಂಗ್ರೆಸ್ ನಿಂದ ಮಹಾವಲಸೆ, ಬರೋಬ್ಬರಿ 170 ಶಾಸಕರು ಜಂಪ್

ನವದೆಹಲಿ: 2016 -2020 ರ ನಡುವೆ ನಡೆದ ಚುನಾವಣೆಗಳ ಸಂದರ್ಭದಲ್ಲಿ ಬರೊಬ್ಬರಿ 170 ಶಾಸಕರು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ. ಇದೇ ಅವಧಿಯಲ್ಲಿ ಬಿಜೆಪಿಯ 18 ಶಾಸಕರು ಪಕ್ಷ ನಿಷ್ಠೆಯನ್ನು ಬದಲಾಯಿಸಿದ್ದಾರೆ.

ಮತದಾನ ಹಕ್ಕುಗಳ ಗುಂಪು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೀಫಾರ್ಮ್ಸ್ ನೀಡಿರುವ ವರದಿಯಲ್ಲಿ ಈ ಮಾಹಿತಿ ಗೊತ್ತಾಗಿದೆ. 2016 ರಿಂದ 20 ರ ನಡುವೆ ರಾಜಕೀಯ ಪಕ್ಷಗಳನ್ನು ಬದಲಾಯಿಸಿದ 405 ಶಾಸಕರಲ್ಲಿ 182 ಜನ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 38 ಜನ ಕಾಂಗ್ರೆಸ್ ಪಕ್ಷವನ್ನು ಸೇರಿದ್ದು, 25 ಜನ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

2019 ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಐದು ಜನ ಲೋಕಸಭೆ ಸದಸ್ಯರು ಬಿಜೆಪಿಯನ್ನು ತೊರೆದು ಬೇರೆ ಪಕ್ಷಗಳಿಗೆ ಸೇರಿದ್ದಾರೆ. 7 ಮಂದಿ ರಾಜ್ಯಸಭೆ ಸದಸ್ಯರು ಕಾಂಗ್ರೆಸ್ ಪಕ್ಷ ತೊರೆದು 2016 -20 ರ ನಡುವೆ ಬೇರೆ ಪಕ್ಷಕ್ಕೆ ಸೇರ್ಪಡೆಯಾಗಿ ಸ್ಪರ್ಧಿಸಿದ್ದಾರೆ.

ಮಧ್ಯಪ್ರದೇಶ, ಮಣಿಪುರ, ಗೋವಾ, ಅರುಣಾಚಲ ಪ್ರದೇಶ ಮತ್ತು ಕರ್ನಾಟಕ ರಾಜ್ಯದ ವಿಧಾನಸಭೆಗಳಲ್ಲಿ ಇತ್ತೀಚೆಗೆ ಸರ್ಕಾರಗಳು ಪತನಗೊಳ್ಳುವುದಕ್ಕೆ ಕಾರಣ ಕಾಂಗ್ರೆಸ್ ಶಾಸಕರ ಪಕ್ಷಾಂತರದಿಂದ ಎಂಬುದನ್ನು ಗಮನಿಸಬೇಕಿದೆ.

2016 ರಿಂದ 20 ರ ನಡುವೆ ರಾಜಕೀಯ ಪಕ್ಷಗಳನ್ನು ಬದಲಾವಣೆ ಮಾಡಿಕೊಂಡ 16 ಮಂದಿ ರಾಜ್ಯಸಭೆ ಸಂಸದರಲ್ಲಿ 10 ಮಂದಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಕ್ಷ ಬದಲಾವಣೆ ಮಾಡಿದ 12 ಲೋಕಸಭೆ ಸಂಸದರಲ್ಲಿ ಐವರು 2019ರ ಸಂಸತ್ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...