alex Certify ಹೊಲಕ್ಕೆ ಮೇವು ತರಲು ಹೋದ ಹುಡುಗಿ ಮೇಲೆ ಅತ್ಯಾಚಾರ: ವಿಡಿಯೋ ಹರಿಬಿಟ್ಟ ದುರುಳರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಲಕ್ಕೆ ಮೇವು ತರಲು ಹೋದ ಹುಡುಗಿ ಮೇಲೆ ಅತ್ಯಾಚಾರ: ವಿಡಿಯೋ ಹರಿಬಿಟ್ಟ ದುರುಳರು

ಆಗ್ರಾ: ಉತ್ತರಪ್ರದೇಶದ ಬದೌನ್ ನಲ್ಲಿ 50 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಆಗ್ರಾದ ಫಿರೋಜಾಬಾದ್ ನಲ್ಲಿ ಹದಿಹರೆಯದ ಬಾಲಕಿಯನ್ನು ಹೊಲಕ್ಕೆ ಎಳೆದೊಯ್ದು 28 ವರ್ಷದ ಯುವಕ ಅತ್ಯಾಚಾರ ಎಸಗಿದ್ದಾನೆ. ನರ್ಕಿ ಪ್ರದೇಶದಲ್ಲಿ ಘಟನೆ ನಡೆದಿದ್ದು, 16 ವರ್ಷದ ಬಾಲಕಿಯನ್ನು ಬ್ಲಾಕ್ಮೇಲ್ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಡಿಸೆಂಬರ್ 1 ರಂದು ಮೇವು ಸಂಗ್ರಹಿಸಲು ಹೊಲಕ್ಕೆ ಹೋಗಿದ್ದ ಬಾಲಕಿಯನ್ನು ಹೊಲಕ್ಕೆ ಎಳೆದೊಯ್ದ ಆರೋಪಿ ಅತ್ಯಾಚಾರ ಎಸಗಿದ್ದು, ಆತನ ಸ್ನೇಹಿತ ದೃಶ್ಯ ಚಿತ್ರೀಕರಿಸಿ ಬಾಲಕಿಗೆ ಬೆದರಿಕೆ ಹಾಕಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ ಲೋಡ್ ಮಾಡುವುದಾಗಿ ಬೆದರಿಸಿ ಪದೇಪದೇ ಅತ್ಯಾಚಾರ ಎಸಗಿದ್ದಾರೆ. ಬಾಲಕಿ ಆರೋಪಿಯನ್ನು ಭೇಟಿ ಮಾಡಲು ನಿರಾಕರಿಸಿದಾಗ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹರಿಬಿಟ್ಟಿದ್ದು, ವೈರಲ್ ಆಗಿದೆ.

ಈ ಕುರಿತು ಮಾಹಿತಿ ನೀಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮುಖೇಶ್ ಚಂದ್ರ ಮಿಶ್ರಾ, ವಿವಿಧ ಕಾಯ್ದೆಗಳಡಿ ಆರೋಪಿಗಳನ್ನು ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮುಖ್ಯ ಆರೋಪಿ ಬಂಧಿಸಲಾಗಿದ್ದು, ಉಳಿದ ಆರೋಪಿಗಳನ್ನು ಬಂಧಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...