ಕಳೆದ ಐದು ವರ್ಷಗಳಲ್ಲಿ ಭಾರತೀಯ ವಾಯುಪಡೆ ಹಾಗೂ ಸೇನೆಯ 15 ಹೆಲಿಕಾಪ್ಟರ್‌ಗಳು ಅಪಘಾತಕ್ಕೀಡಾಗಿದ್ದು, 31 ಸಿಬ್ಬಂದಿ ಮೃತಪಟ್ಟು, 20 ಮಂದಿ ಗಾಯಗೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಶುಕ್ರವಾರ ಉತ್ತರಿಸಿದೆ.
ಈ ಅವಘಡಗಳಲ್ಲಿ ಪತನವಾದ ಮೂರು ಹೆಲಿಕಾಪ್ಟರ್‌ಗಳು ರಷ್ಯನ್ ನಿರ್ಮಿತ ಮಿ-17 ವಿ5ಗಳಾಗಿವೆ, ಈ ಮೂರರ ಪೈಕಿ ಒಂದು ಸಶಸ್ತ್ರ ಪಡೆಗಳ ಸಿಬ್ಬಂದಿಯ ಮುಖ್ಯಸ್ಥ ಬಿಪಿನ್ ರಾವತ್ ಅಪಘಾತಕ್ಕೀಡಾಗಿದ್ದಾಗಿದೆ.
ಪುಷ್ಪಾ ಪತ್ರಿಕಾಗೋಷ್ಠಿಯಲ್ಲಿ ರಶ್ಮಿಕಾ ಮಸ್ತ್ ಡಾನ್ಸ್
ಅರುಣಾಚಲ ಪ್ರದೇಶದ ತವಾಂಗ್ ಬಳಿ ಅಕ್ಟೋಬರ್ 2017ರಲ್ಲಿ ಸಂಭವಿಸಿದ ಮತ್ತೊಂದು ಅವಘಡದಲ್ಲಿ ಮಿ-17 ವಿ5 ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಅಧಿಕಾರಿಗಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದರು.
ಮಿಕ್ಕಂತೆ ಸ್ವದೇಶೀ ನಿರ್ಮಿತವಾದ ಆರು ಹಗುರ ಹೆಲಿಕಾಪ್ಟರ್‌ಗಳು, ನಾಲ್ಕು ಚೀತಾ ಹೆಲಿಕಾಪ್ಟರ್‌ಗಳು, ಒಂದು ಚೇತಕ್ ಹಾಗೂ ಮಿ-17ಗಳಾಗಿವೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ತಿಳಿಸಿದ್ದಾರೆ.
ಸೇನೆಯ ಶಸ್ತ್ರಸಜ್ಜಿತ ಸುಧಾರಿತ ಲಘು ಹೆಲಿಕಾಪ್ಟರ್ ರುದ್ರಾ ರಣಜೀತ್ ಸಾಗರ ಅಣೆಕಟ್ಟೆ ಮೇಲೆ ಅಪ್ಪಳಿಸಿದ ವಿಚಾರವಾಗಿ ಉತ್ತರಿಸಿದ ಭಟ್, ಅಪಘಾತದ ತನಿಖೆ ನಡೆಸಲು ವಿಶೇಷ ಸಮಿತಿ ರಚಿಸಲಾಗಿದೆ ಎಂದಿದ್ದಾರೆ.