alex Certify ಒಂದೇ ಶಾಲೆಯ 14 ಮಕ್ಕಳಲ್ಲಿ ಕೋವಿಡ್​ 19 ಪಾಸಿಟಿವ್​: ಪೋಷಕರಲ್ಲಿ ಹೆಚ್ಚಿದ ಆತಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಶಾಲೆಯ 14 ಮಕ್ಕಳಲ್ಲಿ ಕೋವಿಡ್​ 19 ಪಾಸಿಟಿವ್​: ಪೋಷಕರಲ್ಲಿ ಹೆಚ್ಚಿದ ಆತಂಕ

ಕೊರೊನಾ ಮೂರನೇ ಅಲೆಯ ಭಯ ಇನ್ನೂ ಜೀವಂತ ಇರುವಾಗಲೇ ಅಲ್ಲಲ್ಲಿ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದು ಆತಂಕ ಹೆಚ್ಚಾಗಿದೆ. ಪಂಜಾಬ್​​ನ ಮುಕ್ತಸರ್​ ಜಿಲ್ಲೆಯ ವರಿಂಗ್​ ಖೇರಾ ಗ್ರಾಮದ ಜವಾಹರ್​​ ನವೋದಯ ವಿದ್ಯಾಲಯದಲ್ಲಿ 14 ವಿದ್ಯಾರ್ಥಿಗಳು ಕೋವಿಡ್​ 19 ಸೋಂಕಿಗೆ ಒಳಗಾಗಿದ್ದಾರೆ. ವಿದ್ಯಾರ್ಥಿಗಳಲ್ಲಿ ಸೋಂಕು ವರದಿಯಾಗುತ್ತಿದ್ದಂತೆಯೇ ಶಾಲೆಯನ್ನು ಮುಚ್ಚಲಾಗಿದೆ.

14 ಸೋಂಕಿತ ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇನ್ನಿಬ್ಬರು ಮಕ್ಕಳು 9ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ. ಕೋವಿಡ್​ ಸೋಂಕಿತ ಮಕ್ಕಳನ್ನು ಮನೆಗೆ ಕಳುಹಿಸಿದರೆ ಸೋಂಕು ಇನ್ನಷ್ಟು ಹೆಚ್ಚಬಹುದು ಎಂಬ ಹಿನ್ನೆಲೆಯಲ್ಲಿ ಶಾಲೆಯಲ್ಲಿಯೇ ಇವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ಮುಂದುವರಿದಿದೆ.

ಸೋಂಕು ವರದಿಯಾದ ಹಿನ್ನೆಲೆಯಲ್ಲಿ 2 ವಾರಗಳ ಕಾಲ ಶಾಲೆಯನ್ನು ಮುಚ್ಚಲಾಗುವುದು ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಕೋವಿಡ್​ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಪಂಜಾಬ್​ನಲ್ಲಿ ಅಗಸ್ಟ್​ 2ರಿಂದ ಶಾಲೆಗಳನ್ನು ಪುನಾರಂಭಿಸಲಾಗಿದೆ. ಶಾಲೆಗಳನ್ನು ಪುನಾರಂಭ ಮಾಡುವ ವೇಳೆ ಕೋವಿಡ್​ ಮಾರ್ಗಸೂಚಿಗಳ ಪಾಲನೆ ಕಡ್ಡಾಯ ಎಂದು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...