ಕೊರೊನಾ ಮೂರನೇ ಅಲೆಯ ಭಯ ಇನ್ನೂ ಜೀವಂತ ಇರುವಾಗಲೇ ಅಲ್ಲಲ್ಲಿ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದು ಆತಂಕ ಹೆಚ್ಚಾಗಿದೆ. ಪಂಜಾಬ್ನ ಮುಕ್ತಸರ್ ಜಿಲ್ಲೆಯ ವರಿಂಗ್ ಖೇರಾ ಗ್ರಾಮದ ಜವಾಹರ್ ನವೋದಯ ವಿದ್ಯಾಲಯದಲ್ಲಿ 14 ವಿದ್ಯಾರ್ಥಿಗಳು ಕೋವಿಡ್ 19 ಸೋಂಕಿಗೆ ಒಳಗಾಗಿದ್ದಾರೆ. ವಿದ್ಯಾರ್ಥಿಗಳಲ್ಲಿ ಸೋಂಕು ವರದಿಯಾಗುತ್ತಿದ್ದಂತೆಯೇ ಶಾಲೆಯನ್ನು ಮುಚ್ಚಲಾಗಿದೆ.
14 ಸೋಂಕಿತ ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇನ್ನಿಬ್ಬರು ಮಕ್ಕಳು 9ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ. ಕೋವಿಡ್ ಸೋಂಕಿತ ಮಕ್ಕಳನ್ನು ಮನೆಗೆ ಕಳುಹಿಸಿದರೆ ಸೋಂಕು ಇನ್ನಷ್ಟು ಹೆಚ್ಚಬಹುದು ಎಂಬ ಹಿನ್ನೆಲೆಯಲ್ಲಿ ಶಾಲೆಯಲ್ಲಿಯೇ ಇವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ಮುಂದುವರಿದಿದೆ.
ಸೋಂಕು ವರದಿಯಾದ ಹಿನ್ನೆಲೆಯಲ್ಲಿ 2 ವಾರಗಳ ಕಾಲ ಶಾಲೆಯನ್ನು ಮುಚ್ಚಲಾಗುವುದು ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಕೋವಿಡ್ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಪಂಜಾಬ್ನಲ್ಲಿ ಅಗಸ್ಟ್ 2ರಿಂದ ಶಾಲೆಗಳನ್ನು ಪುನಾರಂಭಿಸಲಾಗಿದೆ. ಶಾಲೆಗಳನ್ನು ಪುನಾರಂಭ ಮಾಡುವ ವೇಳೆ ಕೋವಿಡ್ ಮಾರ್ಗಸೂಚಿಗಳ ಪಾಲನೆ ಕಡ್ಡಾಯ ಎಂದು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.