alex Certify 3 ವರ್ಷಗಳಲ್ಲಿ 135 ದೇಶ ನೋಡಬೇಕಾ ? ಇಲ್ಲಿದೆ ಅದ್ಭುತ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ವರ್ಷಗಳಲ್ಲಿ 135 ದೇಶ ನೋಡಬೇಕಾ ? ಇಲ್ಲಿದೆ ಅದ್ಭುತ ಅವಕಾಶ

ಮೂರು ವರ್ಷದಲ್ಲಿ 135 ದೇಶಗಳು, 13 ಜಗತ್ತಿನ ಅದ್ಭುತ ಸ್ಥಳಗಳ ಪರ್ಯಟನೆ ಮಾಡುವ ಪ್ಯಾಕೇಜ್‌ ಅನ್ನು ಲೈಫ್​​ ಆ್ಯಟ್​ ಸೀ ಕ್ರೂಸಿಸ್​ ಘೋಷಣೆ ಮಾಡಿದೆ.

ಈ ಹಡುಗು ಮೂರು ವರ್ಷಗಳಲ್ಲಿ 135 ದೇಶಗಳಿಗೆ ಕರೆದುಕೊಂಡು ಹೋಗಿ ಬರುತ್ತದೆ. ಪ್ರಪಂಚಾದ್ಯಂತ ಮೂರು ವರ್ಷಗಳಲ್ಲಿ ಈ ಪ್ರಯಾಣ ಮಾಡಬಹುದಾಗಿದೆ. ಒಂದು ವರ್ಷಕ್ಕೆ ದರವನ್ನು ಕೂಡ ಇದು ನಿಗದಿ ಮಾಡಿದೆ. ಒಬ್ಬ ವ್ಯಕ್ತಿಗೆ 24.5 ಲಕ್ಷದಿಂದ 89.9 ಲಕ್ಷ ರೂಪಾಯಿವರೆಗೆ ಇರಲಿದೆ.

ಈ ಹಡಗು ಜಗತ್ತಿನ್ 14 ಅದ್ಭುತಗಳಲ್ಲಿ 13 ಅದ್ಭುತಗಳ ಸ್ಥಳಕ್ಕೆ ಭೇಟಿ ಕೊಡಲಿದೆ. ಇದರ ಹೆಸರು ಎಂವಿ ಜೆಮಿನಿ. 400 ಕ್ಯಾಬಿನ್​ ಹೊಂದಿದ್ದು, ಸಾವಿರಕ್ಕೂ ಅಧಿಕ ಕೋಣೆಗಳಿವೆ. ಊಟ, ವಸತಿ, ಸ್ವಿಮ್ಮಿಂಗ್​ಪೂಲ್​. ಇಂಟರ್ನೆಟ್ ಸೇರಿದಂತೆ ಎಲ್ಲಾ ಸೌಲಭ್ಯಗಳೂ ಇವೆ.

ಬರುವ ನವೆಂಬರ್​ 1ರಿಂದ ಇಸ್ತಾನ್​ಬುಲ್​ನಿಂದ ಇದು ಇದರ ಪ್ರಯಾಣ ಪ್ರಾರಂಭವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...