ಮೆಲ್ಬೋರ್ನ್: ಚಿಪ್ಸ್ ಇಷ್ಟಪಡದ ಮಕ್ಕಳು ಯಾರು ಹೇಳಿ..? ಎಲ್ಲರೂ ಕೂಡ ಕುರುಕಲು ತಿಂಡಿ ಚಿಪ್ಸ್ ನ್ನು ಇಷ್ಟಪಟ್ಟು ತಿಂತಾರೆ. ಆದ್ರೆ, ಅಂಥಾ ಚಿಪ್ಸ್ ಒಂದು ಬರೋಬ್ಬರಿ 11 ಲಕ್ಷ ರೂ. ಬೆಲೆಬಾಳುತ್ತೆ ಅಂದ್ರೆ ನಂಬ್ತೀರಾ..? ಅಯ್ಯೋ ಅಂಥಾ ವಿಶೇಷತೆ ಏನಿದೆ ಅಂತಾ ಆಶ್ಚರ್ಯಪಡುತ್ತಿದ್ದೀರಾ..? ಹಾಗಿದ್ರೆ ಈ ಸ್ಟೋರಿ ಓದಿ…
ಆಸ್ಟ್ರೇಲಿಯಾದ 13 ವರ್ಷದ ಬಾಲಕಿಯೊಬ್ಬಳು ಚಿಪ್ಸ್ ತಿನ್ನುತ್ತಿದ್ದಳು. ಈ ವೇಳೆ ಒಂದು ತುಂಡು ಚಿಪ್ ಇತರೆ ಚಿಪ್ಸ್ ಗಿಂತ ಭಿನ್ನವಾಗಿ ಕಂಡು ಬಂತು. ಇದು ತನ್ನ ಮೂರು ಬಿಂದುಗಳಲ್ಲೂ ಉಬ್ಬಿರುವ ರೀತಿಯಲ್ಲಿತ್ತು. ಕೂಡಲೇ ಅವಳು ಅದರ ವಿಡಿಯೋ ಮಾಡಿ ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೋ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಆನ್ ಲೈನ್ ನಲ್ಲಿ ಮಾರಾಟ ಮಾಡುವಂತೆ ಸಲಹೆ ನೀಡಿದ್ದರು.
ಹೈಕಮಾಂಡ್ ನಿಂದ ಒಳ್ಳೆ ನಿರ್ಧಾರ; ಕಾಲಚಕ್ರ ತಿರುಗುತ್ತಿರುತ್ತೆ ಎಂದ ಸೋಮಶೇಖರ ರೆಡ್ಡಿ
ನೆಟ್ಟಿಗರ ಸಲಹೆಯಂತೆ ಈ ಉಬ್ಬಿಕೊಂಡಿರುವ ಚಿಪ್ ನ ಚಿತ್ರಗಳನ್ನು ಈಬೇ ನಲ್ಲಿ ಆಸ್ಟ್ರೇಲಿಯನ್ $ 0.99ಗೆ ಹರಾಜಿಗಿಟ್ಟಳು. ಕೆಲವರಿಗೆ ಇದರ ಬಗ್ಗೆ ಅಂಥಾ ವಿಶೇಷತೆ ಕಂಡು ಬಂದಿಲ್ಲ. ಇನ್ನೂ ಕೆಲವರಿಗೆ ಇದು ಅಮೂಲ್ಯ ವಸ್ತುವಾಗಿ ಕಂಡಿದೆ. ಈಬೇ ನಲ್ಲಿ ಪಫಿ ಚಿಪ್ ಹರಾಜಿಗೆ ಹಾಕಿದ ಕೂಡಲೇ ಬಿಡ್ಡಿಂಗ್ ಬೆಲೆ ಗಗನಕ್ಕೇರಿದೆ. ಹರಾಜಿಗಿಟ್ಟ 1 ಗಂಟೆಯಲ್ಲಿ $10,000ಕ್ಕೆ ಏರಿದೆ. ಪ್ರಸ್ತುತ ಬಿಡ್ ದರ $ 20,300 (11 ಲಕ್ಷ ರೂ.) ಆಗಿದ್ದು, ಇನ್ನೂ 5 ದಿನಗಳು ಬಾಕಿ ಉಳಿದಿವೆ. ಸದ್ಯ ಬಾಲಕಿ ಫುಲ್ ಖುಷಿಯಾಗಿದ್ದಾಳೆ.