alex Certify 12 ಮಂದಿ ಕುಟುಂಬ ಸದಸ್ಯರನ್ನು ಹೊಂದಿದ್ದ ಚುನಾವಣಾ ಅಭ್ಯರ್ಥಿಗೆ ಸಿಕ್ಕಿದ್ದು ಒಂದೇ ಮತ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

12 ಮಂದಿ ಕುಟುಂಬ ಸದಸ್ಯರನ್ನು ಹೊಂದಿದ್ದ ಚುನಾವಣಾ ಅಭ್ಯರ್ಥಿಗೆ ಸಿಕ್ಕಿದ್ದು ಒಂದೇ ಮತ….!

ಗ್ರಾಮ ಪಂಚಾಯತ್​ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬ ಕೇವಲ 1 ಮತವನ್ನು ಮಾತ್ರ ಗಳಿಸಿದ್ದು ಫಲಿತಾಂಶವನ್ನು ಕಂಡ ಅಭ್ಯರ್ಥಿಯು ಅತೀವವಾಗಿ ನೊಂದಿದ್ದಾನೆ. ಈ ವ್ಯಕ್ತಿಗೆ ಪಂಚಾಯತ್​ ಎಲೆಕ್ಷನ್​​ನಲ್ಲಿ ಸೋತಿದ್ದಕ್ಕಿಂತ ಹೆಚ್ಚಾಗಿ ತನಗೆ ಸಿಕ್ಕ ಮತದಿಂದಾಗಿ ಅತೀವವಾಗಿ ಮುಖಭಂಗವಾಗಿದೆ. ಈತನ ಮನೆಯಲ್ಲಿ 12 ಮಂದಿ ವಯಸ್ಕರಿದ್ದರೂ ಸಹ ಒಬ್ಬರೇ ಒಬ್ಬರೂ ಈತನಿಗೆ ಮತ ಹಾಕದೇ ಇದ್ದದ್ದು ವಿಪರ್ಯಾಸ. ಗುಜರಾತ್​​ನ ವಾಪಿ ಜಿಲ್ಲೆಯಲ್ಲಿ ಇಂತಹದ್ದೊಂದು ವಿಚಿತ್ರ ಘಟನೆ ನಡೆದಿದೆ.

ವಾಪಿ ಜಿಲ್ಲೆಯ ಚಾರ್ವಾಲಾ ಗ್ರಾಮದಲ್ಲಿ ಸರಪಂಚ್​ ಚುನಾಚಣೆಗೆ ಇದೇ ಗ್ರಾಮದ ಸಂತೋಷ್​ ಎಂಬವರು ನಾಮಪತ್ರ ಸಲ್ಲಿಸಿದ್ದರು. ಏನಿಲ್ಲ ಅಂದರೂ ತನ್ನ ಕುಟುಂಬದ 12 ಮಂದಿ ಹಾಗೂ ತನ್ನದೊಂದು ಮತ ಸೇರಿ 13 ಮತವಾದರೂ ನನ್ನ ಠೇವಣಿಗೆ ಬಂದು ಬೀಳಬಹುದು ಎಂಬ ವಿಶ್ವಾಸದಲ್ಲಿದ್ದರು ಎನ್ನಲಾಗಿದೆ.

ಆದರೆ ಮತ ಎಣಿಕೆ ವೇಳೆಯಲ್ಲಿ ಸಂತೋಷ್​ ಲೆಕ್ಕಾಚಾರ ಬುಡಮೇಲಾಗಿದೆ. ಸಂತೋಷ್​ಗೆ ಒಂದೇ ಮತ ಅಂದರೆ ಖುದ್ದು ಸಂತೋಷ್​ ತನಗಾಗಿ ಚಲಾಯಿಸಿದ ಮತ ಬಿಟ್ಟರೆ ಒಂದೇ ಒಂದು ಮತವೂ ಸಂತೋಷ್​ ತೆಕ್ಕೆಗೆ ಬಂದಿರಲಿಲ್ಲ. ಕುಟುಂಬಸ್ಥರೂ ಸಹ ತನಗೆ ಮತ ಹಾಕದೇ ಇರೋದನ್ನು ಅರಿತು ಸಂತೋಷ್​ ಅತೀವವಾಗಿ ನೊಂದಿದ್ದಾರೆ.

ಗುಜರಾತ್​ ವಿವಿಧ ಜಿಲ್ಲೆಗಳಲ್ಲಿ ಗ್ರಾಮಪಂಚಾಯತ್​ ಚುನಾವಣೆ ನಡೆದಿದ್ದು ಮಂಗಳವಾರ ಗುಜರಾತ್​ ರಾಜ್ಯದ 8600 ಗ್ರಾಮಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...