alex Certify 119 ವರ್ಷಗಳ ಬಳಿಕ ಲೈಬ್ರರಿಗೆ ಪುಸ್ತಕ ಹಿಂದಿರುಗಿಸಿದ ಓದುಗ, ಕೊನೆಯ ಪುಟದಲ್ಲಿತ್ತು ಇಂಥಾ ಬರಹ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

119 ವರ್ಷಗಳ ಬಳಿಕ ಲೈಬ್ರರಿಗೆ ಪುಸ್ತಕ ಹಿಂದಿರುಗಿಸಿದ ಓದುಗ, ಕೊನೆಯ ಪುಟದಲ್ಲಿತ್ತು ಇಂಥಾ ಬರಹ….!

ಗ್ರಂಥಾಲಯದಿಂದ ನಾವು ಪುಸ್ತಕ ಕೊಂಡೊಯ್ದರೆ ಒಂದು ವಾರದೊಳಗೆ ಅದನ್ನು ಹಿಂದಿರುಗಿಸಬೇಕು. ಹೆಚ್ಚೆಂದರೆ ಓದುಗರು ಒಂದೆರಡು ತಿಂಗಳು ಅದನ್ನು ಇಟ್ಟುಕೊಳ್ಳಬಹುದು. ಆದರೆ ಅಮೆರಿಕದ ವೆಸ್ಟ್ ವರ್ಜೀನಿಯಾ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ 119 ವರ್ಷಗಳ ಬಳಿಕ ಓದುಗರೊಬ್ಬರು ಕೊಂಡೊಯ್ದಿದ್ದ ಪುಸ್ತಕವನ್ನು ಹಿಂದಿರುಗಿಸಲಾಗಿದೆ. ಈ ಪುಸ್ತಕವನ್ನು 1903ರ ಡಿಸೆಂಬರ್‌ 10ರಂದು ಮತ್ತೊಂದು ಗ್ರಂಥಾಲಯದಿಂದ ಎರವಲು ಪಡೆಯಲಾಗಿತ್ತು.

119 ವರ್ಷಗಳ ಬಳಿಕ ಈ ಪುಸ್ತಕ ಮರಳಿ ಲೈಬ್ರರಿ ಸೇರಿದೆ.”ಆನ್ ಎಲಿಮೆಂಟರಿ ಟ್ರೀಟೈಸ್ ಆನ್ ಎಲೆಕ್ಟ್ರಿಸಿಟಿ” ಎಂಬ ಶೀರ್ಷಿಕೆಯ ಪುಸ್ತಕ ಇದು. ಈ ಪುಸ್ತಕವನ್ನು 1882 ರಲ್ಲಿ ಪ್ರಕಟಿಸಲಾಗಿದೆ. ಮೊದಲ ಬೆಳಕಿನ ಬಲ್ಬ್ ಕಂಡು ಹಿಡಿದು ಮೂರು ವರ್ಷಗಳ ಬಳಿಕ ಪ್ರಕಟವಾದ ಪುಸ್ತಕ ಇದು. ಪುಸ್ತಕಗಳ ರಾಶಿಯಿಂದ ಈ ಹಳೆಯ ರತ್ನವನ್ನು ಗುರುತಿಸಿದ ನಂತರ, ವೆಸ್ಟ್ ವರ್ಜೀನಿಯಾ ವಿಶ್ವವಿದ್ಯಾನಿಲಯದ ಲೈಬ್ರರಿಗಳಲ್ಲಿ ಅಪರೂಪದ ಪುಸ್ತಕಗಳ ಕ್ಯುರೇಟರ್ ಸ್ಟೀವರ್ಟ್ ಪ್ಲಿನ್, ನ್ಯೂ ಬೆಡ್‌ಫೋರ್ಡ್ ಫ್ರೀ ಪಬ್ಲಿಕ್ ಲೈಬ್ರರಿಯನ್ನು ಸಂಪರ್ಕಿಸಿ  ಪುಸ್ತಕವನ್ನು ಮೇಲ್ ಮಾಡಿದರು.

ಜೂನ್ 22 ರಂದು, ನ್ಯೂ ಬೆಡ್‌ಫೋರ್ಡ್ ಫ್ರೀ ಪಬ್ಲಿಕ್ ಲೈಬ್ರರಿ ತನ್ನ ಫೇಸ್‌ಬುಕ್ ಪುಟದಲ್ಲಿ ಹಿಂದಿರುಗಿದ ಪುಸ್ತಕದ ಫೋಟೋಗಳನ್ನು ಹಂಚಿಕೊಂಡಿದೆ. ಪುಸ್ತಕ ಹಿಂದಿರುಗಿಸಲು ತಡವಾಗಿದ್ದಕ್ಕೆ ನ್ಯೂ ಬೆಡ್‌ಫೋರ್ಡ್ ಸಾರ್ವಜನಿಕ ಗ್ರಂಥಾಲಯ 2 ಡಾಲರ್‌ನಷ್ಟು ದಂಡ ವಿಧಿಸಿದೆ. ಆದರೆ ಪ್ರತಿ ದಿನಕ್ಕೆ ಐದು ಸೆಂಟ್‌ಗಳಷ್ಟು ವಿಳಂಬ ಶುಲ್ಕವನ್ನು ವಿಧಿಸಿದ್ದರೂ 2 ಲಕ್ಷ ರೂಪಾಯಿ ದಂಡ ಪಾವತಿಸಬೇಕಾಗುತ್ತಿತ್ತು. ನೂರು ವರ್ಷಗಳಿಗೂ ಹಳೆಯದಾದ ವಿಷಯಗಳನ್ನು ಪುಸ್ತಕದ ಪ್ರಾರಂಭ ಮತ್ತು ಕೊನೆಯಲ್ಲಿ ಬರೆಯಲಾಗಿದೆ. ಪುಸ್ತಕವನ್ನು ಬಿಡುಗಡೆ ಮಾಡಿದ್ದು, ಹಿಂದಿರುಗಿಸಿದ್ದು, ಕೊನೆಯ ಸಂಚಿಕೆ ಬಿಡುಗಡೆ ಹೀಗೆ ಎಲ್ಲಾ ವಿವರಗಳೂ ಇದರಲ್ಲಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...