ಭಾರೀ ಚಂಡಮಾರುತದಿಂದಾಗಿ ಚರಂಡಿಗೆ ಬಿದ್ದ 11 ವರ್ಷದ ಬಾಲಕಿ ಮೃತಪಟ್ಟ ದಾರುಣ ಘಟನೆ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ನಡೆದಿದೆ.
ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ 11 ವರ್ಷದ ಮೃತ ಬಾಲಕಿ ತಾಯಿ ಜೊತೆ ಮಾರುಕಟ್ಟೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ಎದುರು ಹೋಗುತ್ತಿದ್ದ ವಾಹನಕ್ಕೆ ದಾರಿ ಮಾಡಿಕೊಡಲು ಹೋಗಿ ಆಯತಪ್ಪಿ ಅಲ್ಲೇ ಇದ್ದ ಚರಂಡಿಗೆ ಬಿದ್ದಿದ್ದಾಳೆ. ಚಂಡಮಾರುತದಿಂದಾಗಿ ಸುರಿದ ಭಾರೀ ಮಳೆಯಿಂದಾಗಿ ಚರಂಡಿಯೂ ತುಂಬಿ ಹೋಗಿದ್ದರಿಂದ ಆಕೆ ಕೊಚ್ಚಿ ಹೋಗಿದ್ದಾಳೆ ಎಂದು ತಿಳಿದುಬಂದಿದೆ.
ಕಾಂಗ್ರಾದ ಚಹ್ರಿ ಎಂಬ ಗ್ರಾಮದಲ್ಲಿ ಈ ದಾರುಣ ಘಟನೆ ಸಂಭವಿಸಿದೆ. ನೇಹಾ ಚರಂಡಿಗೆ ಬೀಳುತ್ತಿದ್ದಂತೆಯೇ ಆಕೆಯ ತಾಯಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾಳೆ. ಗ್ರಾಮಸ್ಥರು ರಕ್ಷಣಾ ಪಡೆಯನ್ನ ಸ್ಥಳಕ್ಕೆ ಕರೆಸಿದ್ದಾರೆ. ಆದರೆ ಆಕೆ ದೇಹ ಎಲ್ಲೆಲ್ಲೂ ಪತ್ತೆಯಾಗಿರಲಿಲ್ಲ. ಸಾಕಷ್ಟು ಹುಡುಕಾಟದ ಬಳಿಕ ಮೃತ ಬಾಲಕಿಯ ಮೃತ ದೇಹ ಘಟನೆ ನಡೆದ ಸ್ಥಳದಿಂದ 300 ಮೀಟರ್ ದೂರದಲ್ಲಿ ಪತ್ತೆಯಾಗಿದೆ.
ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ನಾಗಾಲೋಟ: ಏಪ್ರಿಲ್ನಲ್ಲಿ ದಾಖಲೆ ಮಟ್ಟದ ಚಂದಾದಾರರನ್ನ ಸಂಪಾದಿಸಿದ ಜಿಯೋ
ಪ್ರಬಲ ಬಿರುಗಾಳಿ ಹಾಗೂ ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಕಾಂಗ್ರಾ, ಧರ್ಮ ಶಾಲಾ ಸೇರಿದಂತೆ ಇನ್ನೂ ಅನೇಕ ಜಿಲ್ಲೆಗಳು ಸಂಪೂರ್ಣ ಅಸ್ತವ್ಯಸ್ತವಾಗಿವೆ. ಕಾಂಗ್ರಾದಲ್ಲಿ ರಕ್ಷಣಾ ಪಡೆ ಬೀಡು ಬಿಟ್ಟಿದ್ದು ಬೆಳಗ್ಗೆಯಿಂದ ನೀರಿನಲ್ಲಿ ಮುಳುಗಿದ್ದ ಐವರನ್ನ ರಕ್ಷಣೆ ಮಾಡಿದೆ. ನಾಲ್ವರು ಮಹಿಳೆಯರು ಸೇರಿದಂತೆ ಇನ್ನೂ 9 ಮಂದಿ ಕಾಣೆಯಾಗಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಭಾರೀ ಮಳೆಗೆ ಮನೆಗಳು ಜಲಾವೃತವಾಗಿದ್ದರೆ, ಹೆದ್ದಾರಿಗಳಲ್ಲಿ ಭೂ ಕುಸಿತ ಸಂಭವಿಸಿದೆ. ಮರಗಳು ಹಾಗೂ ವಿದ್ಯುತ್ ಕಂಬಗಳು ಧರಾಶಾಹಿಯಾಗಿದೆ. ರಸ್ತೆಗಳಲ್ಲಿ ನೀರು ನುಗ್ಗಿದ್ದು ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.