ತನ್ನ ಒಂಬತ್ತನೇ ವಯಸ್ಸಿನಲ್ಲೇ ಐಓಎಸ್ ಅಪ್ಲಿಕೇಶನ್ ಒಂದನ್ನು ಅಭಿವೃದ್ಧಿಪಡಿಸಿ ಭಾರೀ ಸುದ್ದಿಯಾಗಿದ್ದ ಹನಾ ರಫೀಕ್‌ಳ ಸಹೋದರೆ ಲೀನಾ ರಫೀಕ್ ತನ್ನ 11ನೇ ವಯಸ್ಸಿನಲ್ಲಿ ಕೃತಕ ಬುದ್ಧಿಮತ್ತೆಯ ಜಗತ್ತಿನಲ್ಲಿ ಗಮನಾರ್ಹ ಸಾಧನೆಗೈದಿದ್ದಾಳೆ.
ಆಪಲ್ ಸಿಇಓ ಟಿಮ್ ಕುಕ್‌ರಿಂದ ಭಾರೀ ಮೆಚ್ಚುಗೆಗೆ ಪ್ರಾತ್ರವಾಗಿರುವ ಈ ಅನ್ವೇಷಣೆಯು ಕಣ್ಣುಗಳ ಸಂಕು ಹಾಗೂ ವೈದ್ಯಕೀಯ ಪರಿಸ್ಥಿತಿಗಳನ್ನು ಪತ್ತೆ ಮಾಡುತ್ತದೆ.
ಸ್ವಯಂ ಕಲಿಕೆಯಿಂದ ಕೋಡರ್ ಆಗಿರುವ ಲೀನಾ, ’ಒಲ್ಗರ್ ಐಸ್ಕ್ಯಾನ್’ ಹೆಸರಿನ ಕೃತಕ ಬುದ್ಧಿಮತ್ತೆ ಆಧರಿತ ಈ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದ್ದಾರೆ. ಟ್ರೇನ್ಡ್ ಮಾಡೆಲ್‌ಗಳನ್ನು ಬಳಸಿಕೊಂಡು ಆರ್ಕಸ್, ಮೆಲನೋಮಾ, ಟೆರಿಜಿಯಂ ಹಾಗೂ ಕ್ಯಾಟರಾಕ್ಟ್‌ಗಳನ್ನು ಪತ್ತೆ ಮಾಡಬಲ್ಲ ಅಪ್ಲಿಕೇಶನ್ ಇದಾಗಿದೆ.
“ನನ್ನ 10ನೇ ವಯಸ್ಸಿನ ಈ ಎಐ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದೇನೆ. ನಿಮ್ಮ ಐಫೋನ್ ಮೂಲಕ ವಿಶಿಷ್ಟವಾದ ಸ್ಕ್ಯಾನಿಂಗ್ ಪ್ರಕ್ರಿಯೆ ಮೂಲಕ ಈ ಅಪ್ಲಿಕೇಶನ್ ಕಣ್ಣಿನ ಅನೇಕ ಸಮಸ್ಯೆಗಳನ್ನು ಪತ್ತೆ ಮಾಡುತ್ತದೆ. ಸುಧಾರಿತ ಗಣಕ ಯಂತ್ರದ ದೃಷ್ಟಿ ಹಾಗೂ ಮಷಿಲ್ ಕಲಿಕೆ ಆಲ್ಗರಿದಂಗಳನ್ನು ಬಳಸಿಕೊಂಡು ಬೆಳಕು ಮತ್ತು ಬಣ್ಣದ ಪ್ರಖರತೆ, ದೂರ, ಫ್ರೇಂ ವ್ಯಾಪ್ತಿಯೊಳಗಿನ ದೃಷ್ಟಿ ನೋಟಗಳು ಸೇರಿದಂತೆ ಅನೇಕ ವಿಚಾರಗಳನ್ನು ವಿಶ್ಲೇಷಿಸಿ ನೋಡುತ್ತದೆ ಒಲ್ಗರ್.
ಸ್ಕ್ಯಾನ್ ಮಾಡಿದ ಬಳಿಕ ಈ ಅಪ್ಲಿಕೇಶನ್ ಟ್ರೇನ್ಡ್ ಮಾಡೆಲಡ್‌ಗಳನ್ನು ಬಳಸಿಕೊಂಡು ಆರ್ಕಸ್, ಮೆಲನೋಮಾ, ಟೆರಿಜಿಯಂ ಮತ್ತು ಕೆಟರಾಕ್ಟ್‌ಗಳಂಥ ದೃಷ್ಟಿ ಸಮಸ್ಯೆಗಳನ್ನು ಪತ್ತೆ ಮಾಡುತ್ತದೆ. ಯಾವುದೇ ಮೂರನೇ ಪಾರ್ಟಿ ಲೈಬ್ರರಿ ಅಥವಾ ಪ್ಯಾಕೇಜ್‌ಗಳಿಲ್ಲದೇ ಈ ಅಪ್ಲಿಕೇಶನ್‌ಅನ್ನು ಸ್ವಿಫ್ಟ್‌ಯುಐ ಎಂಬ ತಂತ್ರಾಂಶ ಮೇಲೆ ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ ನನಗೆ ಆರು ತಿಂಗಳ ಮಟ್ಟಿನ ಸಂಶೋಧನೆ ಹಾಗೂ ಅಭಿವೃದ್ಧಿ ಮಾಡಬೇಕಾಗಿ ಬಂದಿದೆ,” ಎಂದು ಲೀನಾ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.