ಆತನ ವಯಸ್ಸು ಜಸ್ಟ್ 11, ನೋಡೋಕೆ ಮುದ್ದಾಗಿರೋ ಹುಡುಗ. ಆಟ ಆಡುವ ವಯಸ್ಸಿನಲ್ಲಿ ಆತ ಸಾವು ಬದುಕಿನ ಹೋರಾಟ ನಡೆಸ್ತಿದ್ದ.. ಆತನಿಗೆ ಜೀವನದಲ್ಲಿ ಮರೆಯೋಕೆ ಆಗದಂತಹ ಅದ್ಭುತ ಹುಟ್ಟು ಹಬ್ಬದ ಉಡುಗೊರೆಯೊಂದು ಆತನಿಗೆ ಸಿಕ್ಕಿದೆ.
ಅಸಲಿಗೆ ಈ ಪುಟ್ಟ ಪೋರನ ಹೆಸರು ಜಸ್ಟಿನ್ ಇತನಿಗೆ ಕ್ಯಾನ್ಸರ್ ಖಾಯಿಲೆ. ಈ ಖಾಯಿಲೆಯ ನೋವು ಸಂಕಟ ಅನುಭವಿಸಿದವರಿಗೆನೇ ಗೊತ್ತು. ಆ ದಿನ ಜಸ್ಟಿನ್ ಹುಟ್ಟು ಹಬ್ಬ. ಎಂದಿನಂತೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದಾನೆ. ಆತ ಹಾಸ್ಪಿಟಲ್‌ಗೆ ಬರೋದು ಮೊದಲೇ ಗೊತ್ತಿದ್ದ, ಅಲ್ಲಿನ ಸಿಬ್ಬಂದಿಗಳು ಆತನ ಹುಟ್ಟುಹಬ್ಬಕ್ಕಂತಾನೇ ಕೇಕ್ ಸ್ವೀಟ್ ತಂದು ಸಪ್ರೈಸ್ ಕೊಟ್ಟಿದ್ದಾರೆ. ಆ ಕ್ಷಣದಲ್ಲಿ ಆತ ಎಷ್ಟು ಖುಷಿಯಾಗಿದ್ದ ಅನ್ನೊದು ಆತನ ಕಣ್ಣೀರೇ ಹೇಳುತ್ತಿತ್ತು.
ನೀನು ಅನಾರೋಗ್ಯಕ್ಕೆ ಚಿಕಿತ್ಸೆ ಪಡೀತಾ ಇರಬಹುದು. ನೀನು ಈ ಕಾಯಿಲೆಯನ್ನ ಗೆಲ್ಲಬಹುದು, ಇಲ್ಲಾ ಸೋಲಲೂಬಹುದು ಆದರೆ ಯಾವುದೇ ಕಾರಣಕ್ಕೆ ಜೀವನದಲ್ಲಿ ಸೋಲಬೇಡ. ನೀನು ಗೆದ್ದೆ ಗೆಲ್ತಿಯಾ ನಾನು ಗ್ಯಾರಂಟಿ ಕೊಡ್ತೇನೆ. ಅನ್ನೊ ತಲೆಬರಹದೊಂದಿಗೆ ಈ ವಿಡಿಯೋವನ್ನ ಸೊಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋ ನೆಟ್ಟಿಗರು ಇನ್ನಷ್ಟು ಭಾವುಕರಾಗುತ್ತಿದ್ದಾರೆ.