ಇರಾಕ್: ಉತ್ತರ ಇರಾಕ್ ನ ಮದುವೆ ಮಂಟಪದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ ಮತ್ತು 150 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಇರಾಕ್ನ ಹಮ್ದಾನಿಯಾ ಪ್ರದೇಶದ ನಿನೆವೆ ಪ್ರಾಂತ್ಯದಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ರಾಜಧಾನಿ ಬಾಗ್ದಾದ್ನ ವಾಯುವ್ಯಕ್ಕೆ ಸುಮಾರು 335 ಕಿಲೋಮೀಟರ್ (205 ಮೈಲಿ) ದೂರದಲ್ಲಿರುವ ಉತ್ತರ ನಗರ ಮೊಸುಲ್ನ ಹೊರಗೆ ಈ ದುರಂತ ಸಂಭವಿಸಿದೆ.
ಮದುವೆಯಲ್ಲಿ ಸುಮಾರು 700 ಜನರು ಭಾಗಿಯಾಗಿದ್ದರು. ಈ ವೇಳೆ ಖುಷಿಯಲ್ಲಿದ್ದ ಕುಟುಂಬ ಪಟಾಕಿ ಸಿಡಿಸಿದ್ದಾರೆ. ಪಟಾಕಿಯ ಕಿಡಿ ಮದುವೆ ಮಂಟಪಕ್ಕೆ ಬಿದ್ದಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಮದುವೆಯ ಹಾಲ್ ಗೆ ಹಬ್ಬಿಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.