ಒಂದೂವರೆ ಶತಕೋಟಿ ಜನಸಂಖ್ಯೆಯ ದೇಶದಲ್ಲಿ ಉದ್ಯೋಗದ ಸಮಸ್ಯೆ ಅತಿ ದೊಡ್ಡ ಸಾಮಾಜಿಕ ಪಿಡುಗುಗಳಲ್ಲಿ ಒಂದಾಗಿಬಿಟ್ಟಿದೆ ಎಂದು ಬಿಡಿಸಿ ಹೇಳಬೇಕಿಲ್ಲ. ಅಲ್ಲೋ ಇಲ್ಲೋ ಒಂದಷ್ಟು ಹುದ್ದೆಗಳು ಖಾಲಿ ಇವೆ ಎಂದರೆ ಸಾವಿರಾರು/ಲಕ್ಷಾಂತರ ಅರ್ಜಿಗಳ ರಾಶಿಯೇ ಬಂದು ಬೀಳುವ ಮಟ್ಟಿಗೆ ಪರಿಸ್ಥಿತಿ ಬಂದು ನಿಂತು ಎಷ್ಟೋ ದಶಕಗಳೇ ಕಳೆದಿವೆ.
ಕೋಲ್ಕತ್ತಾದ ಆಸ್ಪತ್ರೆಯೊಂದರ ಶವಾಗಾರದಲ್ಲಿ ಹುದ್ದೆಗಳು ಖಾಲಿ ಇದ್ದು, ಇದಕ್ಕಾಗಿ ಎಂಟನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿತ್ತು. ಇಲ್ಲಿನ ಸೀಲ್ರತನ್ ಸರ್ಕಾರ್ ವೈದ್ಯಕೀಯ ಕಾಲೇಜಿನಲ್ಲಿ ಮಾಸಿಕ 15,000 ರೂಪಾಯಿ ವೇತನದ ಈ ಕೆಲಸಕ್ಕೆ ಆರು ಓಪನಿಂಗ್‌ಗಳು ಮಾತ್ರ ಇದ್ದರೂ, ಸಾವಿರಾರು ಅರ್ಜಿಗಳು ಬಂದಿವೆ.
ಚಲಿಸುತ್ತಿರುವ ರೈಲಿನಿಂದ ಬಿದ್ದ ಪ್ರಯಾಣಿಕನನ್ನು ಕೂದಲೆಳೆಯಲ್ಲಿ ರಕ್ಷಿಸಿದ ಆರ್‌ಪಿಎಫ್ ಪೇದೆ
ಈ ಅರ್ಜಿಗಳ ಪೈಕಿ 100 ಮಂದಿ ಇಂಜಿನಿಯರಿಂಗ್ ಮುಗಿಸಿದ್ದು, 500 ಮಂದಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2000 ಪದವೀಧರರೂ ಸಹ ಅರ್ಜಿ ಸಲ್ಲಿಸಿದ್ದಾರೆ. ಒಟ್ಟಾರೆ 8000 ಪ್ಲಸ್ ಅರ್ಜಿಗಳು ಈ ಕೆಲಸಗಳಿಗೆ ಬಂದಿದ್ದು, 784 ಮಂದಿಯನ್ನು ಲಿಖಿತ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.