alex Certify 100 ನೇ ಜನ್ಮ ದಿನದಂದು ಮರುಮದುವೆಯಾದ ವೃದ್ಧ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

100 ನೇ ಜನ್ಮ ದಿನದಂದು ಮರುಮದುವೆಯಾದ ವೃದ್ಧ….!

ತಮ್ಮ 100 ನೇ ವರ್ಷದ ಜನ್ಮ ದಿನವನ್ನು ವಿಶೇಷವಾಗಿ ಆಚರಿಸಲು ಮುಂದಾದ ಹಿರಿಯ ನಾಗರಿಕರೊಬ್ಬರು ತಮ್ಮ 90 ವರ್ಷದ ಪತ್ನಿಯನ್ನು ಮರು ಮದುವೆಯಾಗಿದ್ದಾರೆ. ಈ ವಿಚಾರವು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ವ್ಯಾಪಕ ಮೆಚ್ಚುಗೆಯನ್ನು ಸಂಪಾದಿಸಿದೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ ಜಿಲ್ಲೆಯ ಗ್ರಾಮವೊಂದರ ನಿವಾಸಿಯಾದ ಬಿಸ್ವನಾಥ್​ ಸರ್ಕಾರ್​ ತಮ್ಮ ನೂರನೇ ವರ್ಷದ ಜನ್ಮ ದಿನದ ಪ್ರಯುಕ್ತ ಈ ರೀತಿಯಾಗಿ ಮರು ಮದುವೆಯಾಗಿದ್ದಾರೆ.

ಬಿಸ್ವನಾಥ್​ ಸರ್ಕಾರ್​​ ಶತದಿನೋತ್ಸವವನ್ನು ವಿಶೇಷವಾಗಿಸಬೇಕೆಂದುಕೊಂಡ ಅವರ ಆರು ಮಂದಿ ಮಕ್ಕಳು, 23 ಮಂದಿ ಮೊಮ್ಮಕ್ಕಳು ಹಾಗೂ 10 ಮಂದಿ ಮರಿ ಮೊಮ್ಮಕ್ಕಳು ಈ ರೀತಿಯಾಗಿ ಪ್ಲಾನ್​ ಮಾಡಿದ್ದಾರೆ.

ಸಾಕಷ್ಟು ಪ್ಲಾನ್​ಗಳನ್ನು ಬಿಸ್ವನಾಥ್​ ಅವರ ಮುಂದೆ ಇಡಲಾಗಿತ್ತು. ಕೊನೆಗೆ ಬಿಸ್ವನಾಥ್​​ ತಮ್ಮ ಪತ್ನಿಯನ್ನು ಮರು ಮದುವೆಯಾಗುವ ಪ್ಲಾನ್​ಗೆ ಸಮ್ಮತಿ ಸೂಚಿಸಿದರು. ಹೀಗಾಗಿ ಫೆಬ್ರವರಿ 16ರಂದು ಬಿಸ್ವನಾಥ್​ ಹಾಗೂ ಸುರೋಧ್ವನಿ ಮರು ಮರು ಮದುವೆಯಾಗಿದ್ದಾರೆ.

1953 ರಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು ಎಂದು ಇವರ ಮೊದಲ ಸೊಸೆ ಮಾಹಿತಿ ನೀಡಿದ್ದಾರೆ. ಇವರ ಮರು ಮದುವೆ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದ್ದು ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ಗಿಟ್ಟಿಸಿಕೊಂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...