alex Certify BIG NEWS: ಧಾರ್ಮಿಕ ಮತಾಂತರ ನಿಷೇಧ; ದೇಶದಲ್ಲೇ ಕಠಿಣ ಕಾನೂನು ಜಾರಿಗೆ ತಂದ ಮಧ್ಯಪ್ರದೇಶ -10 ವರ್ಷ ಜೈಲು, 1 ಲಕ್ಷ ರೂ. ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಧಾರ್ಮಿಕ ಮತಾಂತರ ನಿಷೇಧ; ದೇಶದಲ್ಲೇ ಕಠಿಣ ಕಾನೂನು ಜಾರಿಗೆ ತಂದ ಮಧ್ಯಪ್ರದೇಶ -10 ವರ್ಷ ಜೈಲು, 1 ಲಕ್ಷ ರೂ. ದಂಡ

ಭೋಪಾಲ್: ಮಧ್ಯಪ್ರದೇಶ ವಿಧಾನಸಭೆಯಲ್ಲಿ ಸೋಮವಾರ ಮತಾಂತರ ನಿಷೇಧ ಮಸೂದೆ ಮಂಡಿಸಲಾಗಿದೆ. ಈ ಮಸೂದೆಯಲ್ಲಿ ಧಾರ್ಮಿಕ ಮತಾಂತರ ನಿಷೇಧಕ್ಕೆ ಹೊಸ ಕಾನೂನು ಜಾರಿಗೆ ತರಲಾಗಿದ್ದು, 10 ವರ್ಷಗಳವರೆಗೆ ಜೈಲು ಶಿಕ್ಷೆ, 1 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು.

ಮದುವೆಯ ಕಾರಣ ಅಥವಾ ಯಾವುದೇ ಮೋಸದ ವಿಧಾನಗಳಿಂದ ಮತಾಂತರವಾಗುವುದನ್ನು ನಿಷೇಧಿಸಲಾಗಿದೆ. ಈ ಮಸೂದೆಯು 2020 ರ ಕಾನೂನು ಬಾಹಿರ ಮತಾಂತರ ನಿಷೇಧ ಸುಗ್ರೀವಾಜ್ಞೆಯನ್ನು ಹೋಲುತ್ತದೆ. ಮತಾಂತರ ನಿಷೇಧ ಕಾನೂನು ಜಾಮೀನು ರಹಿತವಾಗಿರುತ್ತದೆ.

ಗೃಹಸಚಿವ ನರೋತ್ತಮ ಮಿಶ್ರಾ ಅವರು ನೀಡಿರುವ ಮಾಹಿತಿಯಂತೆ ದೇಶದಲ್ಲಿಯೇ ಅತ್ಯಂತ ಕಠಿಣ ಕಾನೂನು ಇದಾಗಿದೆ. ಈ ಕಾನೂನನ್ನು ಉಲ್ಲಂಘಿಸಿ ನಡೆಯುವ ಯಾವುದೇ ಮದುವೆಯನ್ನು ಅನೂರ್ಜಿತವೆಂದು ಪರಿಗಣಿಸಲಾಗುವುದು.

ಮತಾಂತರಗೊಳ್ಳಲು ಇಚ್ಚಿಸುವವರು 60 ದಿನಗಳ ಮೊದಲು ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಬೇಕು. ಮತಾಂತರವಾಗುವ ಧರ್ಮದ ಧಾರ್ಮಿಕ ಮುಖಂಡರು 60 ದಿನಗಳ ಮುಂಚಿತವಾಗಿ ಅದರ ಬಗ್ಗೆ ತಿಳಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಪ್ರಾಪ್ತ ವಯಸ್ಕರ ಧಾರ್ಮಿಕ ಮತಾಂತರದ ಪ್ರಕರಣದಲ್ಲಿ ನಿಯಮ ಉಲ್ಲಂಘನೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಸಾಮೂಹಿಕ ಮತಾಂತರದ ಸಂದರ್ಭದಲ್ಲಿಯೂ ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...