alex Certify ದಿನಕ್ಕೆ 10 ಲೀ. ಹಾಲು, ಪ್ರತಿ ಊಟಕ್ಕೆ 1200 ರೂ. ಮೌಲ್ಯದ ತರಕಾರಿ; 72 ಸದಸ್ಯರನ್ನು ಹೊಂದಿರುವ ಅವಿಭಕ್ತ ಕುಟುಂಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನಕ್ಕೆ 10 ಲೀ. ಹಾಲು, ಪ್ರತಿ ಊಟಕ್ಕೆ 1200 ರೂ. ಮೌಲ್ಯದ ತರಕಾರಿ; 72 ಸದಸ್ಯರನ್ನು ಹೊಂದಿರುವ ಅವಿಭಕ್ತ ಕುಟುಂಬ

ಇಡೀ ಜಗತ್ತೇ ವಿಭಕ್ತ ಕುಟುಂಬ ಮಾರ್ಗದತ್ತ ಸಾಗುತ್ತಿರುವಾಗ ಮಹಾರಾಷ್ಟ್ರದ ಸೊಲ್ಲಾಪುರದ ಅಪರೂಪದ ಕುಟುಂಬವೊಂದು ಒಂದೇ ಸೂರಿನಡಿ 72 ಸದಸ್ಯರನ್ನು ಹೊಂದಿದ್ದು ಕಣ್ಮನ ಸೆಳೆಯುತ್ತಿದೆ.

ಹಿರಿಯರು, ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಮಹಾರಾಷ್ಟ್ರದ ಕುಟುಂಬದ ನಾಲ್ಕು ತಲೆಮಾರುಗಳು ಒಂದೇ ಸೂರಿನಡಿ ವಾಸಿಸುತ್ತಿವೆ. ಇದು ಸುಂದರವಾದ ಭಾರತೀಯ ಅವಿಭಕ್ತ ಕುಟುಂಬದ ಉದಾಹರಣೆಯಾಗಿದೆ.

ವ್ಯಾಪಾರ ವಹಿವಾಟು ನಡೆಸುತ್ತಿರುವ ಡೊಯಿಜೋಡೆ ಕುಟುಂಬದಲ್ಲಿ 72 ಜನರಿಗೆ ಪ್ರತಿದಿನ 10 ಲೀಟರ್ ಹಾಲು ಬೇಕಾಗುತ್ತದೆ. ಪ್ರತಿ ಊಟಕ್ಕೆ 1000-1200 ರೂ. ಮೌಲ್ಯದ ತರಕಾರಿಗಳನ್ನು ಖರೀದಿಸಬೇಕಾಗುತ್ತೆ.

ಮೂಲತಃ ಕರ್ನಾಟಕದವರಾದ ದೋಯಿಜೋಡೆ ಕುಟುಂಬ ಸುಮಾರು 100 ವರ್ಷಗಳ ಹಿಂದೆ ಸೊಲ್ಲಾಪುರಕ್ಕೆ ವಲಸೆ ಬಂದಿತ್ತು.

ಟ್ವಿಟ್ಟರ್ ಬಳಕೆದಾರರಾದ ಅನಂತ್ ರೂಪನಗುಡಿ ಅವರು ಹಂಚಿಕೊಂಡಿರುವ ಬಿಬಿಸಿ ವೀಡಿಯೊದಲ್ಲಿ ದೊಡ್ಡ ಅವಿಭಕ್ತ ಕುಟುಂಬವಿದೆ. ವೀಡಿಯೋದಲ್ಲಿ ಕುಟುಂಬದ ಸದಸ್ಯರಾದ ಅಶ್ವಿನ್ ಡೊಯಿಜೋಡೆ ಮಾತನಾಡುತ್ತಾ, “ನಾವು ದೊಡ್ಡ ಕುಟುಂಬವನ್ನು ಹೊಂದಿದ್ದೇವೆ, ನಮಗೆ ಬೆಳಿಗ್ಗೆ ಮತ್ತು ಸಂಜೆ 10 ಲೀಟರ್ ಹಾಲು ಬೇಕಾಗುತ್ತದೆ. ಪ್ರತಿ ಊಟದಲ್ಲಿ ಸುಮಾರು 1,000-1,200 ರೂ ಮೌಲ್ಯದ ತರಕಾರಿಗಳನ್ನು ಸೇವಿಸಲಾಗುತ್ತದೆ. ಮಾಂಸಾಹಾರಿ ಊಟ ಮೂರರಿಂದ ನಾಲ್ಕು ಪಟ್ಟು ಹೆಚ್ಚು ದುಬಾರಿಯಾಗಿದೆ.” ಎಂದಿದ್ದಾರೆ.

ಏತನ್ಮಧ್ಯೆ ಕುಟುಂಬ ಸದಸ್ಯರ ಸಂಖ್ಯೆಯಿಂದ ಆರಂಭದಲ್ಲಿ ಚಿಂತೆ ಮಾಡುತ್ತಿದ್ದು, ಆದರೆ ಈಗ ಅವರು ಇಡೀ ಕುಟುಂಬದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎಂದು ಕುಟುಂಬದ ಮಹಿಳೆಯರು ಹೇಳಿದರು.

ಆರಂಭದಲ್ಲಿ ನಾನು ಈ ಕುಟುಂಬದ ಪ್ರಮಾಣದಿಂದ ಭಯಭೀತನಾಗಿದ್ದೆ. ಆದರೆ ಎಲ್ಲರೂ ನನಗೆ ಸಹಾಯ ಮಾಡಿದರು. ನನ್ನ ಅತ್ತೆ, ಸಹೋದರಿ ಮತ್ತು ಸೋದರ ಮಾವ ನನಗೆ ನೆಲೆಸಲು ಸಹಾಯ ಮಾಡಿದರು ಎಂದು ಸೊಸೆ ನೈನಾ ಡೊಯಿಜೋಡೆ ಹೇಳಿದರು.
ದೊಡ್ಡ ಭಾರತೀಯ ಅವಿಭಕ್ತ ಕುಟುಂಬವನ್ನು ಕಂಡು ನೆಟಿಜನ್‌ಗಳು ಸಂತೋಷಪಟ್ಟಿದ್ದಾರೆ ಮತ್ತು ಭಾರತೀಯ ಸಂಸ್ಕೃತಿಯನ್ನು ಶ್ಲಾಘಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...