alex Certify 10 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ ಈ ʼಸ್ಪೆಷಲ್ʼ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ ಈ ʼಸ್ಪೆಷಲ್ʼ ವಿಡಿಯೋ

ಮ್ಯೂಸಿಕ್ ಅಂದ್ರೆ ಬಹುತೇಕ ಮಂದಿ ಇಷ್ಟಪಡುತ್ತಾರೆ. ಎಷ್ಟೇ ಬ್ಯುಸಿ ಕೆಲಸದ ಮಧ್ಯೆಯೂ ಮ್ಯೂಸಿಕ್ ಅನ್ನು ಕೇಳುತ್ತಾ ಮನಸ್ಸು ಹಗುರ ಮಾಡಿಕೊಳ್ಳುತ್ತಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ನರಿಯೊಂದಕ್ಕೆ ಬ್ಯಾಂಜೋ ನುಡಿಸಿರುವ ದೃಶ್ಯ ಕಂಡುಬಂದಿದೆ.

ಅಮೆರಿಕಾದ ಕೊಲೊರಾಡೋದ ಕಾಡಿನಲ್ಲಿ ವ್ಯಕ್ತಿಯೊಬ್ಬ ಹಗಲಿನಲ್ಲಿ ಕ್ಯಾಬಿನ್ ಬಳಿ ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವ್ಯಕ್ತಿಯು ತನ್ನ ತೋಳುಗಳಲ್ಲಿ ಬ್ಯಾಂಜೋವನ್ನು ಹಿಡಿದು, ಅದನ್ನು ಸುಂದರವಾಗಿ ನುಡಿಸಿದ್ದಾನೆ. ಇದು ಪುಟ್ಟ ಕಾಡು ನರಿಯನ್ನು ಭಾವಪೂರ್ಣ ಸಂಗೀತದ ಕಡೆಗೆ ಆಕರ್ಷಿಸಿದೆ.

ಈ ವೇಳೆ ನುಡಿಸುವಿಕೆಯನ್ನು ಕೇಳಲು ನರಿಯು ವ್ಯಕ್ತಿಯ‌ ಮುಂದೆ ಕುಳಿತುಕೊಂಡಿದೆ. ನರಿಯ ಬಗ್ಗೆ ಭಯಪಡದೆ, ಆತ ತನ್ನ ಬ್ಯಾಂಜೋವನ್ನು ನುಡಿಸುವುದನ್ನು ಮುಂದುವರೆಸಿದ್ದಾನೆ. ನರಿಯು ತನ್ನ ಕಿವಿಗಳನ್ನು ಸರಿಸಿ ಸುತ್ತಲೂ ನೋಡುತ್ತಾ, ತಾಳ್ಮೆಯಿಂದ ನುಡಿಸುತ್ತಿರುವ ಸುಂದರ ರಾಗವನ್ನು ಆಹ್ಲಾದಕರವಾಗಿ ಕೇಳಿಸಿಕೊಳ್ಳುತ್ತದೆ. ನಂತರ ಕಾಡು ನರಿಯು ವ್ಯಕ್ತಿಯ ಸುತ್ತಲೂ ಚಲಿಸುತ್ತದೆ. ಮತ್ತೆ ಬಂದು ಅವನ ಮುಂದೆ ಕುಳಿತುಕೊಳ್ಳುತ್ತದೆ.

ಈ ಸುಂದರ ವಿಡಿಯೋವನ್ನು ಇದು ಸಂಗೀತದ ಶಕ್ತಿ ಎಂಬ ಶೀರ್ಷಿಕೆಯಡಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಇದು ಈಗಾಗಲೇ 10.5 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಭಾರಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...