10ನೇ ತರಗತಿಯ ಟಾಪರ್ ಆತ್ಮಹತ್ಯೆಗೆ ಶರಣಾದ ಘಟನೆಯು ಚಿತ್ತೂರಿನ ಪಲಮನೇರ್ ಎಂಬ ಪುಟ್ಟ ಪಟ್ಟಣದಲ್ಲಿ ನಡೆದಿದೆ. ಸೋಡಾ ಮಾರಾಟಗಾರನ ಪುತ್ರಿ ಮಿಸ್ಬಾ ಫಾತಿಮಾ ಎಂಬಾಕೆ ಆತ್ಮಹತ್ಯೆಗೆ ಶರಣಾಗಿದ್ದು ಈಕೆ ಗಂಗಾವರಂನ ಬ್ರಹ್ಮರ್ಷಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ.
ಶಾಲೆಯ ಪ್ರಾಂಶುಪಾಲರ ಅನುಚಿತ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿ ಈ ನಿರ್ಧಾರ ಕೈಗೊಂಡಿದ್ದಾಳೆ ಎಂದು ಫಾತಿಮಾ ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರಾಂಶುಪಾಲ ರಮೇಶ್ ಈ ಶೈಕ್ಷಣಿಯ ವರ್ಷ ಪೂರ್ಣಗೊಳ್ಳುವ ಮುನ್ನವೇ ಮಿಸ್ಬಾಳಿಗೆ ವರ್ಗಾವಣೆ ಪ್ರಮಾಣ ಪತ್ರ ನೀಡಿದ್ದರು.
ರಮೇಶ್ನನ್ನ ಪಲಮನೇರ್ ಪೊಲೀಸರು ಇಂದು ಬಂಧಿಸಿದ್ದಾರೆ. ಇವರ ವಿರುದ್ಧ 306, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಶಾಲೆಯಿಂದಲೂ ರಮೇಶ್ರನ್ನು ಅಮಾನತುಗೊಳಿಸಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಬಾಲಕಿಯ ಡೆತ್ನೋಟ್ ಪ್ರಾಂಶುಪಾಲರ ವಿರುದ್ಧ ಅನುಮಾನಕ್ಕೆ ಕಾರಣವಾಗಿದೆ. ಮಿಸ್ಬಾ ಫಾತಿಮಾಳ ಸಹಪಾಠಿಯ ತಂದೆಯು ನನ್ನ ಟಿಸಿಯನ್ನು ನೀಡುವಂತೆ ಪ್ರಾಂಶುಪಾಲರಿಗೆ ಒತ್ತಡ ಹೇರಿದ್ದರು. ನಾನು ಶಾಲೆಯಿಂದ ಹೊರ ಹೋದರೆ ತನ್ನ ಮಗಳು ಕ್ಲಾಸ್ಗೆ ಮೊದಲ ಸ್ಥಾನ ಪಡೆಯುತ್ತಾಳೆ ಎಂಬುದು ಅವರ ಉದ್ಧೇಶವಾಗಿತ್ತು ಎಂದು ಬರೆಯಲಾಗಿದೆ.
ಆದರೆ ಮಿಸ್ಬಾ ಸಹಪಾಠಿಯ ತಂದೆಯು ರಾಜಕೀಯದಲ್ಲಿ ತೊಡಗಿಸಿಕೊಂಡಿರುವುದರಿಂದ ಅವರನ್ನು ಬಂಧಿಸಲು ಪೊಲೀಸರು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಮಿಸ್ಬಾ ಕುಟುಂಬಸ್ಥರು ಆರೋಪಿಸಿದ್ದಾರೆ.