alex Certify 1 ಲೀಟರ್‌ ಡೀಸೆಲ್‌ ನಲ್ಲಿ ರೈಲು ಎಷ್ಟು ಕಿಮೀ ಓಡುತ್ತೆ ಗೊತ್ತಾ ? ಇಲ್ಲಿದೆ ಮೈಲೇಜ್‌ ಕುರಿತ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1 ಲೀಟರ್‌ ಡೀಸೆಲ್‌ ನಲ್ಲಿ ರೈಲು ಎಷ್ಟು ಕಿಮೀ ಓಡುತ್ತೆ ಗೊತ್ತಾ ? ಇಲ್ಲಿದೆ ಮೈಲೇಜ್‌ ಕುರಿತ ಸಂಪೂರ್ಣ ವಿವರ

ರೈಲು ಜನಸಾಮಾನ್ಯರ ನೆಚ್ಚಿನ ಸಂಚಾರ ವ್ಯವಸ್ಥೆಗಳಲ್ಲೊಂದು. ಪ್ರತಿನಿತ್ಯ ದೇಶದ ಲಕ್ಷಗಟ್ಟಲೆ ಜನರನ್ನು ಅವರ ಗಮ್ಯಸ್ಥಾನಕ್ಕೆ ಕರೆದೊಯ್ಯುವ ರೈಲಿನ ಪ್ರಯಾಣವು ರೋಮಾಂಚನಕಾರಿಯಾಗಿರುತ್ತದೆ.

ಇದೇ ವೇಳೆ ಡೀಸೆಲ್ ಇಂಜಿನ್‌ನಲ್ಲಿ ಚಲಿಸುವ ರೈಲಿನ ಮೈಲೇಜ್ ಎಷ್ಟಿರಬಹುದು ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡುವುದು ಸಹಜ. ಒಂದು ಲೀಟರ್ ಡೀಸೆಲ್‌ನಲ್ಲಿ ರೈಲು ಎಷ್ಟು ದೂರ ಓಡುತ್ತದೆ ಎಂಬುದು ಕುತೂಹಲಕಾರಿ ಸಂಗತಿ.

ರೈಲಿನ ಮೈಲೇಜ್‌ ಅದರ ನಿಲುಗಡೆ, ಕ್ಲೈಂಬಿಂಗ್ ಎತ್ತರ, ಹೆಚ್ಚು ಅಥವಾ ಕಡಿಮೆ ಲೋಡ್ ಅನ್ನು ಎಳೆಯುವುದು ಸೇರಿದಂತೆ ಎಂಜಿನ್‌ನ ಶಕ್ತಿಯನ್ನು ಅವಲಂಬಿಸಿರುತ್ತದೆ. ಒಂದಲ್ಲ ಹಲವು ಮಾನದಂಡಗಳು ಇದಕ್ಕೆ ಸೇರ್ಪಡೆಯಾಗುತ್ತವೆ. ರೈಲಿನ ಮೈಲೇಜ್, ಆ ರೈಲಿನಲ್ಲಿರುವ ಕೋಚ್‌ಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಕಡಿಮೆ ಬೋಗಿಗಳಿದ್ದಾಗ ಇಂಜಿನ್ ಮೇಲೆ ಕಡಿಮೆ ಒತ್ತಡವಿರುತ್ತದೆ, ಹೀಗಾಗಿ ಅದರ ಶಕ್ತಿ ಹೆಚ್ಚುತ್ತದೆ.

ಆದರೆ ಡೀಸೆಲ್ ಇಂಜಿನ್ ರೈಲುಗಳ ಮೈಲೇಜ್ ಅನ್ನು ಗಂಟೆಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ರೈಲಿನಲ್ಲಿ 12 ಕೋಚ್‌ಗಳಿದ್ದರೆ, ಆ ಪ್ಯಾಸೆಂಜರ್ ರೈಲು ಒಂದು ಕಿಲೋಮೀಟರ್ ಪ್ರಯಾಣಿಸಲು 6 ಲೀಟರ್ ಡೀಸೆಲ್ ಬಳಸುತ್ತದೆ. ಆದಾಗ್ಯೂ ರೈಲಿನ ಮೈಲೇಜ್ ಅನ್ನು ಗಂಟೆಯ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಅಂದರೆ, ಒಂದು ಗಂಟೆಯಲ್ಲಿ ರೈಲು ಎಷ್ಟು ಪ್ರಯಾಣಿಸುತ್ತದೆ ಎಂಬುದನ್ನು ಲೆಕ್ಕ ಹಾಕಲಾಗುತ್ತದೆ. ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಹೆಚ್ಚು ನಿಲುಗಡೆಗಳಿರುವುದಿಲ್ಲ. ಆದರೆ ಇತರ ಸಾಮಾನ್ಯ ರೈಲುಗಳು ಎಲ್ಲಾ ನಿಲ್ದಾಣಗಳಲ್ಲೂ ನಿಲ್ಲುತ್ತ ಸಾಗುತ್ತವೆ. ಆಗ ಸಹಜವಾಗಿಯೇ ಇಂಧನ ಹೆಚ್ಚು ಖರ್ಚಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...