ಚಂಡೀಘಡದ ರಸ್ತೆಯೊಂದರಲ್ಲಿ ಬೀಡಾಡಿ ಹಸು ಅಡ್ಡ ಬಂದ ಹಿನ್ನೆಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ 25.27 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕೆಂದು ಮೋಟಾರ್ ಆಕ್ಸಿಡೆಂಟ್ ಕ್ಲೇಮ್ಸ್ ಟ್ರಿಬ್ಯುನಲ್ (ಎಂಎಸಿಟಿ) ಆದೇಶ ನೀಡಿದೆ.
ಮಾರ್ಚ್ 14, 2017 ರಂದು ಸಂಜೀವ್ ಕುಮಾರ್ ಎಂಬುವರು ತಮ್ಮ ಸಹೋದ್ಯೋಗಿ ರಾಜೇಶ್ ಕುಮಾರ್ ಅವರ ಮೋಟಾರ್ ಸೈಕಲ್ ನಲ್ಲಿ ಕಚೇರಿಯಿಂದ ಮನೆಗೆ ಬರುವ ವೇಳೆ ಅಡ್ಡ ಬಂದ ಬೀಡಾಡಿ ಹಸುವೊಂದಕ್ಕೆ ಡಿಕ್ಕಿಯಾಗಿ ಮೋಟಾರ್ ಸೈಕಲ್ ನಲ್ಲಿದ್ದ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಗಂಭೀರ ಗಾಯಗೊಂಡಿದ್ದ ಸಂಜೀವ್ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಸ್ಪಂದಿಸದೇ ಸಾವನ್ನಪ್ಪಿದ್ದರು.
BIG NEWS: ವಕೀಲೆ ಸಂಗೀತಾ ಮೇಲೆ ಹಲ್ಲೆ ಪ್ರಕರಣಕ್ಕೆ ಮತ್ತೊಂದು ತಿರುವು; ಹಲ್ಲೆಗೂ ಮುನ್ನ ನಡೆದ ಘಟನೆ ವಿಡಿಯೋ ವೈರಲ್
ಸಂಜೀವ್ ಪತ್ನಿ ಸಂಗೀತಾ, ತಮಗೆ ಇಬ್ಬರು ಮಕ್ಕಳು ಮತ್ತು ತಾಯಿ ಇದ್ದಾರೆ. ರಾಜೇಶ್ ವೇಗವಾಗಿ ಮೋಟಾರ್ ಸೈಕಲ್ ಚಾಲನೆ ಮಾಡಿದ್ದರಿಂದ ಅಪಘಾತ ಸಂಭವಿಸಿದೆ. ಹೀಗಾಗಿ ನಮ್ಮ ಕುಟುಂಬದ ನಿರ್ವಹಣೆಗೆ 70 ಲಕ್ಷ ರೂಪಾಯಿಗಳ ಪರಿಹಾರ ಕೊಡಿಸುವಂತೆ ಎಂಎಸಿಟಿಗೆ ಮನವಿ ಮಾಡಿದ್ದರು.
ಈ ಅರ್ಜಿಯನ್ನು ವಿರೋಧಿಸಿದ್ದ ಬೈಕ್ ನ ವಿಮಾ ಕಂಪನಿಯಾದ ನ್ಯೂ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್, ಅಪಘಾತ ನಡೆದ ಸಂದರ್ಭದಲ್ಲಿ ಚಾಲಕ ಸರಿಯಾದ ಮತ್ತು ಪರಿಣಾಮಕಾರಿಯಾದ ಚಾಲನಾ ಪರವಾನಗಿ ಹೊಂದಿರಲಿಲ್ಲ. ಅಲ್ಲದೇ, ಅರ್ಜಿ ಅಪೂರ್ಣವಾಗಿದ್ದು, ಅನಿರ್ದಿಷ್ಟತೆಯಿಂದ ಕೂಡಿದೆ ಎಂದು ವಾದಿಸಿತ್ತು. ಆದರೆ, ಈ ವಾದವನ್ನು ಪರಿಗಣಿಸದ ಎಂಎಸಿಟಿ ಕುಟುಂಬಕ್ಕೆ 25.27 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿದೆ.