alex Certify BIG NEWS: ವಕೀಲೆ ಸಂಗೀತಾ ಮೇಲೆ ಹಲ್ಲೆ ಪ್ರಕರಣಕ್ಕೆ ಮತ್ತೊಂದು ತಿರುವು; ಹಲ್ಲೆಗೂ ಮುನ್ನ ನಡೆದ ಘಟನೆ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಕೀಲೆ ಸಂಗೀತಾ ಮೇಲೆ ಹಲ್ಲೆ ಪ್ರಕರಣಕ್ಕೆ ಮತ್ತೊಂದು ತಿರುವು; ಹಲ್ಲೆಗೂ ಮುನ್ನ ನಡೆದ ಘಟನೆ ವಿಡಿಯೋ ವೈರಲ್

ಬಾಗಲಕೋಟೆ: ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ನಡೆದ ಹಲ್ಲೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು, ತಮ್ಮ ಮೇಲಿನ ಹಲ್ಲೆಗೂ ಮೊದಲು ಸಂಗೀತಾ ಅವರೇ ಮಹಾಂತೇಶ್ ಚೊಳಚಗುಡ್ಡ ಅವರನ್ನು ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ಇದೀಗ ಬಹಿರಂಗವಾಗಿದೆ.

ಬಾಗಲಕೋಟೆಯ ಕೆರೊಡಿ ಆಸ್ಪತ್ರೆ ಬಡಾವಣೆಯಲ್ಲಿ ಮೇ 14ರಂದು ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ವೀರಭದ್ರೇಶ್ವರ ಗಿಫ್ಟ್ ಸೆಂಟರ್ ಮಾಲೀಕ ಮಹಾಂತೇಶ್ ಚೊಳಚಗುಡ್ಡ ಹಾಡ ಹಗಲೇ ನಡುರಸ್ತೆಯಲ್ಲಿ ಪತಿಯ ಮುಂದೆ ಕಾಲಿನಿಂದ ಒದ್ದು, ಕಪಾಳಮೋಕ್ಷ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ವಕೀಲೆ ಸಂಗೀತಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಮಹಾಂತೇಶ್ ತನ್ನ ಹಾಗೂ ತನ್ನ ಪತಿಯ ಮೇಲೆ ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿ, ಕಾಲಿನಿಂದ ಒದ್ದಿರುವುದಾಗಿ ದೂರು ನೀಡಿದ್ದರು.

ಇದೀಗ ಈ ಘಟನೆಗೂ ಮೊದಲಿನ ಘಟನೆ ವಿಡಿಯೋ ಬಹಿರಂಗವಾಗಿದ್ದು, ಅಂದು ಮೇ 14ರಂದು ಸಂಗೀತಾ ತನ್ನ ಪತಿ ನವೀನ್ ಜತೆ ಬಂದು ವೀರಭದ್ರೇಶ್ವರ ಗಿಫ್ಟ್ ಸೆಂಟರ್ ಮಾಲೀಕ ಮಹಾಂತೇಶ್ ಚೊಳಚಗುಡ್ಡ ಅವರನ್ನು ಅವಾಚ್ಯಶಬ್ದಗಳಿಂದ ನಿಂದಿಸಿ ಚಪ್ಪಲಿಯಿಂದ ಹೊಡೆದಿದ್ದರು. ಇದರಿಂದ ಸಹನೆ ಕಳೆದುಕೊಂಡ ಮಹಾಂತೇಶ್ ಚೊಳಚಗುಡ್ಡ ಸಂಗೀತಾ ಮೇಲೆ ಹಲ್ಲೆ ನಡೆಸಿದ್ದಾರೆ. ಇದೀಗ ಸಂಗೀತಾ ಮೊದಲು ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ಬಹಿರಂಗವಾಗಿದೆ.

ಪೊಲೀಸರಿಗೆ ಮನೆ ತೋರಿಸಿದರು ಎಂಬ ಕಾರಣಕ್ಕೆ ಆರಂಭವಾದ ಜಗಳ ಹಲ್ಲೆಗೆ ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...