
ಮಾನ್ಸೂನ್ ಋತುವಿನಲ್ಲಿ ತ್ವಚೆ ಸಾಕಷ್ಟು ತೊಂದರೆ ಅನುಭವಿಸುತ್ತದೆ. ತ್ವಚೆಯ ತೇವಾಂಶದ ಮಟ್ಟ ಬಹಳ ಹೆಚ್ಚಿರುವುದರಿಂದ ಅದು ಉಸಿರಾಡಲು ಸಾಕಷ್ಟು ಸ್ಥಳಾವಕಾಶ ಸಿಗುವುದಿಲ್ಲ. ನೈಸರ್ಗಿಕ ಚಿಕಿತ್ಸೆಗಳ ಮೂಲಕ ತ್ವಚೆಯ ಸೌಂದರ್ಯವನ್ನು ಕಾಪಾಡಬಹುದು.
ಪುದೀನ, ಗುಲಾಬಿ ಎಣ್ಣೆಯಿಂದ ತಯಾರಿಸಿದ ಚಿಕಿತ್ಸೆಯನ್ನು ಪ್ರಯತ್ನಿಸಬಹುದು. ಇದೊಂದು ಕ್ರೀಮ್ ಅಧಾರಿತ ಮಾಯಿಸ್ಚರೈಸಿಂಗ್ ಸ್ಕ್ರಬ್ ಆಗಿದ್ದು ಇದು ತ್ವಚೆಯನ್ನು ಮೃದು ಮಾಡುತ್ತದೆ. ಸತ್ತ ಜೀವಕೋಶಗಳನ್ನು ತೆಗೆದು ಹಾಕುತ್ತದೆ. ಸ್ಕ್ರಬ್ ಟ್ಯಾನ್ ಅನ್ನು ತೆಗೆದು ಹಾಕುತ್ತದೆ.
ಪುದೀನ ಎಲೆಗಳ ಪೇಸ್ಟ್ ಅನ್ನು ನೈಸರ್ಗಿಕ ಎಣ್ಣೆಯೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ ನಿಮ್ಮ ತ್ವಚೆ ಹೊಳಪು ಪಡೆದುಕೊಳ್ಳುತ್ತದೆ. ಪಪ್ಪಾಯ ಹಣ್ಣಿನ ಫೇಸ್ ಪ್ಯಾಕ್ ಕೂಡಾ ಮುಖದ ಕಲೆಗಳನ್ನು ಹೋಗಲಾಡಿಸುತ್ತದೆ.
ಜೇನಿನೊಂದಿಗೆ ನಿಂಬೆರಸ ಬೆರೆಸಿ ತೆಳುವಾಗಿ ಹಚ್ಚಿ, ಹದಿನೈದು ನಿಮಿಷದ ಬಳಿಕ ತೊಳೆದರೆ ವ್ಯಾಕ್ಸಿಂಗ್ ಪರಿಣಾಮ ನಿಮಗೆ ಸಿಗುತ್ತದೆ.