ತೂಕ ಇಳಿಸಿಕೊಳ್ಳಲು ಕೆಲವರು ಆಹಾರ ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ನೀವು ಅನುಸರಿಸುತ್ತಿರುವ ಆಹಾರ ಕ್ರಮ ಸರಿಯಾಗಿರದಿದ್ದರೆ ತೂಕ ಇಳಿಯುವ ಬದಲು ಹೆಚ್ಚಾಗುತ್ತದೆ. ಹಾಗಾಗಿ ನೀವು ತೂಕ ತೂಕವನ್ನು ವೇಗವಾಗಿ ಇಳಿಸಿಕೊಳ್ಳಲು ಬಯಸುತ್ತಿದ್ದರೆ ಫ್ರೂಟ್ ಮತ್ತು ನಟ್ಸ್ ಚಿಯಾ ಸಲಾಡ್ ಅನ್ನು ತಯಾರಿಸಿ ಸೇವಿಸಿ.
ಒಂದು ಪಾತ್ರೆಯಲ್ಲಿ 3 ಚಮಚ ಬೆಲ್ಲ ಮತ್ತು ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದಕ್ಕೆ ಕತ್ತರಿಸಿದ ಪಿಸ್ತಾ ಮತ್ತು ಬಾದಾಮಿ ಸೇರಿದಂತೆ ಎಲ್ಲಾ ತರಹದ ಡ್ರೈಫ್ರೂಟ್ಸ್ ಗಳನ್ನು ಸೇರಿಸಿ. 3 ಚಮಚ ಚಿಯಾ ಬೀಜಗಳನ್ನು ಮಿಕ್ಸ್ ಮಾಡಿ. ಮತ್ತು 2 ಚಮಚ ಜೇನುತುಪ್ಪ, 1 ಚಮಚ ವೆನಿಲ್ಲಾ ಎಸೆನ್ಸ್, 1 ಚಮಚ ದಾಲ್ಚಿನ್ನಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ರಾತ್ರಿಯಿಡಿ ಇಟ್ಟು ಬೆಳಿಗ್ಗೆ ಸ್ವಲ್ಪ ಹೊತ್ತು ಫ್ರಿಜ್ ನಲ್ಲಿಟ್ಟು ನಂತರ ಇದಕ್ಕೆ ಪಪ್ಪಾಯ, ಕಿವಿ, ಅಂಜೂರ, ಬಾಳೆಹಣ್ಣು, ದಾಳಿಂಬೆ, ಮುಂತಾದ ಹಣ್ಣು ಗಳನ್ನು ಸೇರಿಸಿ ಇದಕ್ಕೆ 1 ಕಪ್ ತೆಂಗಿನ ಹಾಲು ಸೇರಿಸಿದರೆ ಸಲಾಡ್ ರೆಡಿಯಾಗುತ್ತದೆ.
ಚಿಯಾ ಬೀಜಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇದರಲ್ಲಿ ಫೈಬರ್ ಮತ್ತು ಪ್ರೋಟೀನ್ ಕೂಡ ಸಮೃದ್ಧವಾಗಿದೆ. ಪಪ್ಪಾಯ ಮತ್ತು ದಾಳಿಂಬೆ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಇದು ನಿಮ್ಮ ಚರ್ಮ ಮತ್ತು ಆಂತರಿಕ ಆರೋಗ್ಯವನ್ನು ಉತ್ತಮವಾಗಿಡುತ್ತದೆ.