alex Certify ‌ಬೆಚ್ಚಿಬೀಳಿಸುವಂತಿದೆ ಪಾಟ್ನಾದಲ್ಲಿ ನಡೆದಿರುವ ಈ ಅಪಘಾತದ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ಬೆಚ್ಚಿಬೀಳಿಸುವಂತಿದೆ ಪಾಟ್ನಾದಲ್ಲಿ ನಡೆದಿರುವ ಈ ಅಪಘಾತದ ದೃಶ್ಯ

ರಸ್ತೆ ಸುರಕ್ಷತಾ ನಿಯಮಗಳ ಕುರಿತು ಎಷ್ಟೇ ಎಚ್ಚರಿಕೆ ನೀಡಿದರೂ ಸಹ ವಾಹನ ಸವಾರರು ಅದನ್ನು ಪಾಲಿಸುವುದು ಅಷ್ಟಕಷ್ಟೇ. ಹೀಗಾಗಿಯೇ ಸರ್ಕಾರಗಳು ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡರೂ ಸಹ ಯಾರೂ ಸಹ ಅದನ್ನು ಕೇರ್ ಮಾಡುತ್ತಿಲ್ಲ.

ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರು ತಮ್ಮ ಸುರಕ್ಷತೆಗೆ ಭಂಗ ತಂದುಕೊಳ್ಳುವುದರ ಜೊತೆಗೆ ಮತ್ತೊಬ್ಬರ ಪ್ರಾಣಕ್ಕೂ ಸಂಚಕಾರ ತಂದೊಡ್ಡುತ್ತಾರೆ.

ಇದಕ್ಕೆ ಉದಾಹರಣೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಬಿಹಾರದ ಪಾಟ್ನಾದಲ್ಲಿ ಈ ಘಟನೆ ನಡೆದಿದೆ.

ಗಂಗಾ ಪಾಥ್ ವೇ ನಲ್ಲಿ ಅತಿ ವೇಗವಾಗಿ ಬಂದ ಬೈಕ್ ಸವಾರನೊಬ್ಬ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದಾಗಿ ಉಭಯ ವಾಹನಗಳ ಸವಾರರು ತೀವ್ರವಾಗಿ ಗಾಯಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...