alex Certify ‌ʼಕಾರ್ಟೂನ್​ ನೆಟ್​ ವರ್ಕ್ʼ​ ಬಂದ್‌ ಆಗುವ ಆತಂಕದಲ್ಲಿದ್ದವರಿಗೆ ಇಲ್ಲಿದೆ ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಕಾರ್ಟೂನ್​ ನೆಟ್​ ವರ್ಕ್ʼ​ ಬಂದ್‌ ಆಗುವ ಆತಂಕದಲ್ಲಿದ್ದವರಿಗೆ ಇಲ್ಲಿದೆ ಗುಡ್‌ ನ್ಯೂಸ್

ನ್ಯೂಯಾರ್ಕ್​: ಕಾರ್ಟೂನ್​ ನೆಟ್​ವರ್ಕ್​ ಅಭಿಮಾನಿಗಳಿಗೆ ಶಾಕಿಂಗ್​ ಸುದ್ದಿ ಎದುರಾಗಿದೆ. 90ರ ದಶಕದಿಂದಲೂ ಆಬಾಲವೃದ್ಧರ ಮನ ಸೂರೆಗೊಳಿಸಿದ್ದ ಕಾರ್ಟೂನ್​ ನೆಟ್​ವರ್ಕ್​ ಇನ್ನುಮುಂದೆ ಟಿ.ವಿ.ಯಲ್ಲಿ ಪ್ರತ್ಯೇಕವಾಗಿ ಪ್ರಸಾರ ಆಗುವುದಿಲ್ಲ. ಇದಕ್ಕೆ ಕಾರಣ ಈ ಚಾನೆಲ್​ ಅನ್ನು ವಾರ್ನರ್ ಬ್ರದರ್ಸ್ ಅನಿಮೇಷನ್‌ನೊಂದಿಗೆ ವಿಲೀನಗೊಳಿಸಲಾಗುತ್ತಿದೆ.

ಈ ಸುದ್ದಿ ತಿಳಿಯುತ್ತಲೇ ಟ್ವಿಟರ್​ನಲ್ಲಿ ‘#RIPCartoonNetwork’ ಟ್ರೆಂಡ್​ ಶುರುವಾಗಿದೆ. ಕಾರ್ಟೂನ್​ ನೆಟ್​ವರ್ಕ್​ನ ಅಭಿಮಾನಿಗಳು ದುಃಖದಿಂದ ಇದಕ್ಕೆ ವಿದಾಯ ಹೇಳುತ್ತಿದ್ದಾರೆ. ಭಾವನಾತ್ಮಕ ಟಿಪ್ಪಣಿಗಳ ಸುರಿಮಳೆ ಟ್ವಿಟರ್​ನಲ್ಲಿ ಶುರುವಾಗಿದೆ.

ಇದನ್ನು ಗಮನಿಸಿರುವ ಕಾರ್ಟೂನ್​ ನೆಟ್​ವರ್ಕ್​ ತಂಡವು, ತನ್ನ ಅಭಿಮಾನಿಗಳಿಗೆ ಸಾಂತ್ವನ ಹೇಳಿದೆ. “ಈ ರೀತಿ ನಿರಾಸೆ ಪಡಬೇಕಾದ ಅಗತ್ಯವಿಲ್ಲ. ನಮ್ಮ ನೆಟ್​ವರ್ಕ್​ಗೆ ಈಗ 30 ವರ್ಷದ ಹರೆಯ. ಆದ್ದರಿಂದ ಸ್ವಲ್ಪ ಬದಲಾವಣೆ ಮಾಡಲಾಗಿದೆಯಷ್ಟೇ. ನಮ್ಮ ಮೂಲ ತತ್ವವನ್ನು ನಾವು ಬಿಟ್ಟುಕೊಡುವುದಿಲ್ಲ. ವಾರ್ನರ್ ಬ್ರದರ್ಸ್ ಅನಿಮೇಷನ್‌ನೊಂದಿಗೆ ವಿಲೀನವಾದ ಮಾತ್ರಕ್ಕೆ ಏನೂ ಹೆಚ್ಚಿಗೆ ಬದಲಾವಣೆ ಆಗುತ್ತಿಲ್ಲ. ಯಾರೂ ಬೇಸರಿಸುವ ಅಗತ್ಯವಿಲ್ಲ” ಎಂದು ಹೇಳಿದೆ.

ಕಾರ್ಟೂನ್ ನೆಟ್‌ವರ್ಕ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್​ನಲ್ಲಿ ಅಭಿಮಾನಿಗಳಿಗೆ ಆಶ್ವಾಸನೆಯನ್ನೂ ನೀಡಲಾಗಿದೆ. “ರಿಪ್​ ಎಂದು ಹೇಳಬೇಡಿ. ನಾವು ಸತ್ತಿಲ್ಲ. ನಾವು ಎಲ್ಲಿಯೂ ಹೋಗುತ್ತಿಲ್ಲ. ನಿಮ್ಮ ಪ್ರೀತಿಯನ್ನು ನಾವು ಹಾಗೆಯೇ ಉಳಿಸಿಕೊಳ್ಳುತ್ತೇವೆ, ಮತ್ತಷ್ಟು ನಾವೀನ್ಯತೆಯೊಂದಿಗೆ ನಮ್ಮ ಕಾರ್ಟೂನ್​ಗಳು ಬರಲಿವೆ. ಅದಕ್ಕಾಗಿ ನೀವೆಲ್ಲಾ ನಿರೀಕ್ಷಿಸಿ” ಎಂದು ಭರವಸೆ ನೀಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...