alex Certify ಕಲ್ಲಿನಿಂದ ಮೃಗಾಲಯದ ಗಾಜಿನ ಗೋಡೆ ಒಡೆದ ಮರಿ ಕೋತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲ್ಲಿನಿಂದ ಮೃಗಾಲಯದ ಗಾಜಿನ ಗೋಡೆ ಒಡೆದ ಮರಿ ಕೋತಿ….!

ನೀವೇನಾದ್ರೂ ತರಲೆ ಮಾಡುತ್ತಿದ್ದರೆ, ಏನದು ಕಪಿಯಂತೆ ಆಡುತ್ತೀಯಲ್ಲಾ ಅಂತಾ ನಿಮಗೆ ಗದರಿರುವ ಅನುಭವವಾಗಿರಬಹುದು. ಮಂಗಗಳು ಭೂಮಿಯ ಮೇಲಿನ ಅತ್ಯಂತ ಬುದ್ಧಿವಂತ ಪ್ರಾಣಿಗಳಲ್ಲಿ ಒಂದಾಗಿದೆ. ಮಂಗಗಳು ಕಾಡಿನಲ್ಲಿ ಮರದಿಂದ ಮರಕ್ಕೆ ಹಾರುತ್ತಾ, ತಾವು ಸ್ವತಂತ್ರವಾಗಿರೋದಕ್ಕೆ ಇಷ್ಟಪಡುತ್ತವೆ.

ಇದೀಗ ಮಂಗವೊಂದು ಮೃಗಾಲಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರು ದಿಗ್ಭ್ರಮೆಗೊಂಡಿದ್ದಾರೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಸಾವಿರಾರು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ಮೃಗಾಲಯದಲ್ಲಿ ಸಂದರ್ಶಕರು ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆಂದು ತೋರುತ್ತಿದೆ.

ಗಾಜಿನ ಗೋಡೆಯ ಬಳಿ ಮರಿ ಕೋತಿ ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಗಾಜಿನ ಗೋಡೆಯಿಂದ ಆಚೆ ಬರುವುದಕ್ಕಾಗಿ ಕಪಿ ಪ್ಲಾನ್ ಮಾಡಿದಂತೆ ತೋರುತ್ತದೆ. ತನ್ನ ಎರಡೂ ಕೈಗಳಲ್ಲಿ ಕಲ್ಲುಗಳನ್ನು ಹಿಡಿದುಕೊಂಡ ಮಂಗವು ಬಲವಾಗಿ ಗಾಜಿನ ಗೋಡೆಗೆ ಬಡಿಯುತ್ತದೆ.

ಜೋರಾಗಿ ಕಲ್ಲಿನಿಂದ ಬಡಿದ ಪರಿಣಾಮ ಗಾಜು ಒಡೆದು ಶಬ್ಧ ಮಾಡುತ್ತದೆ. ಇದರಿಂದ ಮರಿ ಕೋತಿ ಹೆದರಿ ಓಡಿಹೋಗುತ್ತದೆ. ಹಲವು ಇನ್ಸ್ಟಾಗ್ರಾಂ ಬಳಕೆದಾರರು ಮರಿ ಕೋತಿಯ ಬಗ್ಗೆ ಕನಿಕರ ತೋರಿದ್ದಾರೆ. ಅದನ್ನು ಮೃಗಾಲಯದಿಂದ ಮುಕ್ತಗೊಳಿಸುವಂತೆ ಮನವಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...