alex Certify ಹೋಶಂಗಾಬಾದ್​ ಇನ್ಮುಂದೆ ನರ್ಮದಾಪುರಂ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೋಶಂಗಾಬಾದ್​ ಇನ್ಮುಂದೆ ನರ್ಮದಾಪುರಂ…!

ಹೋಶಂಗಾಬಾದ್​ ಜಿಲ್ಲೆಯನ್ನು ನರ್ಮದಾಪುರಂ ಎಂದೂ ಹಾಗೂ ಬಾಬಾಯಿ ಪಟ್ಟಣವನ್ನು ಮಖನ್​ ನಗರ ಎಂದು ಮರುನಾಮಕರಣ ಮಾಡುವ ಮಧ್ಯಪ್ರದೇಶ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರವು ಅನುಮೋದಿಸಿದೆ ಎಂದು ಮುಖ್ಯಮಂತ್ರಿ ಶಿವರಾಜ ಸಿಂಗ್​ ಚೌಹಾಣ್​ ಹೇಳಿದ್ದಾರೆ.

ನರ್ಮದಾ ನದಿಯ ದಕ್ಷಿಣ ದಡದಲ್ಲಿರುವ ಹೋಶಂಗಾಬಾದ್​ ರಾಜ್ಯದ ರಾಜಧಾನಿ ಭೋಪಾಲ್​ನಿಂದ 70 ಕಿಲೋಮೀಟರ್​ ದೂರದಲ್ಲಿದೆ. ನರ್ಮದಾ ನದಿಯ ದಡದಲ್ಲಿರುವ ಸುಂದರವಾದ ಘಾಟ್​ಗಳಿಗೆ ಇದು ಜನಪ್ರಿಯವಾಗಿದೆ. ನದಿಯ ದಡದಲ್ಲಿರುವ ಸತ್ಸಂಗ ಭವನಕ್ಕೆ ಹಿಂದೂ ಸಂತರು ನಿಯಮಿತವಾಗಿ ಭೇಟಿ ನೀಡುತ್ತಾರೆ. ಇವರು ರಾಮಚರಿತ ಮಾನಸ ಹಾಗೂ ಭಗವದ್ಗೀತೆಯ ಕುರಿತು ಧಾರ್ಮಿಕ ಪ್ರವಚನವನ್ನು ನಡೆಸುತ್ತಾರೆ.

ಮೊದಲು ಇದನ್ನು ನರ್ಮದಾಪುರ ಎಂದು ಕರೆಯಲಾಗುತ್ತಿತ್ತು. ನಂತರದ ದಿನಗಳಲ್ಲಿ ಮಾಲ್ವಾ ಸುಲ್ತಾನರ ಮೊದಲ ಆಡಳಿತಗಾರ ಹೋಶಾಂಗ್ ಶಾ ಗೋರಿ ನಂತರ ಹೋಶಂಗಾಬಾದ್ ಎಂದು ಹೆಸರಿಸಲಾಯಿತು. 1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ ಮಧ್ಯ ಭಾರತ, (ನಂತರ ಮಧ್ಯಪ್ರದೇಶ) ರಾಜ್ಯವಾಗಿ ಮಾರ್ಪಟ್ಟ ಬೇರಾರ್ ಕೇಂದ್ರ ಪ್ರಾಂತ್ಯಗಳ ಮತ್ತು ಬೇರಾರ್ ವಿಭಾಗದ ಭಾಗವಾಗಿತ್ತು.

ಹೊಶಂಗಾಬಾದ್ ಜಿಲ್ಲೆಯ ಬಾಬಾಯಿ ಪಟ್ಟಣವು ಪ್ರಸಿದ್ಧ ಹಿಂದಿ ಕವಿ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಪತ್ರಕರ್ತರಾದ ಮಖನ್ ಲಾಲ್ ಚತುರ್ವೇದಿಯವರ ಜನ್ಮಸ್ಥಳವಾಗಿದೆ ಮತ್ತು ಆದ್ದರಿಂದ ಇದನ್ನು ಈಗ ಮಖನ್​ ನಗರ ಎಂದು ಹೆಸರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...