ಹೋಳಿ ಹುಣ್ಣಿಮೆ ಸಮೀಪಿಸುತ್ತಿದೆ, ಫಲ್ಗುಣ ತಿಂಗಳ ಅಷ್ಟಮಿಯಿಂದ ಹುಣ್ಣಿಮೆಯವರೆಗೆ ಅಂದರೆ 8 ದಿನಗಳು ಹೊಲಾಷ್ಟಕ್ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಅಲ್ಲದೇ ಹುಣ್ಣಿಮೆಯ ದಿನದಂದು ಹೋಲಿ ದಹನ ಮಾಡಲಾಗುತ್ತದೆ. ಆ ವೇಳೆ ಹೋಲಿ ದಹನದ ಬೆಂಕಿಯಲ್ಲಿ ಈ ವಸ್ತುಗಳನ್ನು ಹಾಕಿದರೆ ಜೀವನದಲ್ಲಿ ಎದುರಾದ ಸಮಸ್ಯೆ ನಿವಾರಣೆಯಾಗುತ್ತದೆ. ಆ ವಸ್ತುಗಳು ಯಾವುದೆಂಬುದನ್ನು ತಿಳಿಯೋಣ.
*ಮೆಣಸಿನಕಾಯಿಗಳನ್ನು ಬೆಂಕಿಗೆ ಹಾಕಿ ವಿಷ್ಣುವನ್ನು ಪ್ರಾರ್ಥಿಸಿದರೆ ನಿಮ್ಮ ಮನೆಯ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಕುಟುಂಬದಲ್ಲಿ ಸಂತೋಷ ನೆಲೆಸುತ್ತದೆ.
*ಆರ್ಥಿಕ ಬಿಕ್ಕಟ್ಟು ತೊಡೆದು ಹಾಕಲು ಹೋಲಿ ದಹನದ ಬೆಂಕಿಗೆ ಮರದ ವಸ್ತುಗಳನ್ನು ಮತ್ತು ಹಸುವಿನ ವಸ್ತುಗಳಾದ ಹಾಲು ತುಪ್ಪ, ಬೆಣ್ಣೆ, ಮೊಸರನ್ನು ಹಾಕಬೇಕು. ಇದರಿಂದ ಹಣಕಾಸಿನ ಸಮಸ್ಯೆ ದೂರವಾಗುತ್ತದೆ.
*ವೈವಾಹಿಕ ಜೀವನದ ಸಮಸ್ಯೆಗಳು ನಿವಾರಣೆಯಾಗಲು ಬೆಂಕಿಗೆ ಒಂದು ಚಿಟಿಕೆ ಸಿಂಧೂರವನ್ನು ಹಾಕಬೇಕು. ಇದರಿಂದ ಗಂಡ ಹೆಂಡತಿಯ ನಡುವೆ ಪ್ರೀತಿ ನೆಲೆಸಿರುತ್ತದೆ.