alex Certify ಹೊಸ BF-7 ಕೊರೊನಾ ರೂಪಾಂತರಿಗೆ ಡಾ. ರಾಜು ಸೂಚಿಸಿದ್ದಾರೆ ಈ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ BF-7 ಕೊರೊನಾ ರೂಪಾಂತರಿಗೆ ಡಾ. ರಾಜು ಸೂಚಿಸಿದ್ದಾರೆ ಈ ಪರಿಹಾರ

ಬೆಂಗಳೂರು: ಕೊರೊನಾ ಸೋಂಕು ಮತ್ತೆ ಬಂದಿದೆ. ಕೋವಿಡ್ ವೈರಾಣು ರೂಪಾಂತರಗೊಂಡು BF-7 ಎಂದು ಹೊಸ ವೈರಸ್ ಆಗಿ ಕಾಣಿಸಿಕೊಳ್ಳುತ್ತಿದೆ. ಚೀನಾ ಸೇರಿದಂತೆ ವಿದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಭಾರತದಲ್ಲಿಯೂ ಆತಂಕ ಶುರುವಾಗಿದೆ. ಹಾಗಾದರೆ BF-7 ರೂಪಾಂತರಿ ವೈರಸ್ ಗೆ ಪರಿಹಾರವೇನು? ಔಷಧವಿಲ್ಲದೇ ವೈರಸ್ ನಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಡಾ. ರಾಜು ಹೊಸ ವಿಡಿಯೋದಲ್ಲಿ ತಿಳಿಸಿದ್ದಾರೆ.

ರೂಪಾಂತರಗೊಂಡಿರುವ ವೈರಸ್ ಗೆ ವ್ಯಾಕ್ಸಿನೇಷನ್ ಎಷ್ಟು ಉಪಯೋಗಕಾರಿಯಾಗಬಹುದು. BF-7 ವೈರಸ್ ತಡೆಗಟ್ಟುವುದು ಹೇಗೆ ಎಂಬುದನ್ನು ಡಾ. ರಾಜು ಈ ವಿಡಿಯೋದಲ್ಲಿ ತಿಳಿಸಿದ್ದಾರೆ. ಸ್ವಲ್ಪ ನೆಗಡಿ, ಕೆಮ್ಮು ಜ್ವರ ಬಂದಾಕ್ಷಣ ಗಾಬರಿಯಾಗುವ ಅಗತ್ಯವಿಲ್ಲ. ಉಸಿರಾಟದ ತೊಂದರೆ ಕಂಡುಬಂದಲ್ಲಿ ಮಾತ್ರ ನಿರ್ಲಕ್ಷ ವಹಿಸದೇ ಚಿಕಿತ್ಸೆ ಪಡೆಯುವುದು ಸೂಕ್ತ. ಒಂದು ವೇಳೆ ಲಸಿಕೆ ಕೆಲಸ ಮಾಡದಿದ್ದರೆ, ಔಷಧಿಯೇ ಇಲ್ಲ ಎಂದಾಗಲೂ ಸಹ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಸುಲಭ ವಿಧಾನವನ್ನು ಡಾ.ರಾಜು ತಿಳಿಸಿದ್ದಾರೆ.

ಮುಖ್ಯವಾಗಿ ಆರೋಗ್ಯಕರ ಆಹಾರ ಸೇವನೆ, ಶಾಂತಚಿತ್ತವಾಗಿರುವುದು, ಒತ್ತಡವನ್ನು ಸಂಪೂರ್ಣವಾಗಿ ಕಡಿಮೆ ಮಾಡಿಕೊಳ್ಳುವುದು, ಪ್ರಾಣಾಯಾಮ ಅಭ್ಯಾಸ ಮಾಡುವುದು ಉತ್ತಮ. ಯಾವುದೇ ವೈರಸ್ ನಮ್ಮನ್ನು ಕೊಲ್ಲುವುದಿಲ್ಲ, ಬದಲಾಗಿ ಭಯ ನಮ್ಮನ್ನು ಕೊಲ್ಲುತ್ತದೆ ಎಂದು ತಿಳಿಸಿದ್ದಾರೆ. ಕೋವಿಡ್ ಅಥವಾ ಹೊಸ ರೂಪಾಂತರ ವೈರಸ್ ನಿಂದ ರಕ್ಷಿಸಿಕೊಳ್ಳಲು ಅನುಸರಿಸಬೇಕಾದ ಕ್ರಮಗಳನ್ನು ಈ ವಿಡಿಯೋದಲ್ಲಿ ತಿಳಿಸಿದ್ದಾರೆ. BF-7 ಕೊರೊನಾ ರೂಪಾಂತರಿಗೆ ಪರಿಹಾರ ಕುರಿತು ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...