alex Certify ಹೊಸ ಹಾಡಿಗೆ ಲಿಪ್ ಸಿಂಕ್ ಮಾಡೋ ಮೂಲಕ ಮತ್ತೆ ಮರಳಿದ ಇಂಟರ್ನೆಟ್ ಸೆನ್ಸೇಷನ್ ಕಿಲಿ ಪಾಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಹಾಡಿಗೆ ಲಿಪ್ ಸಿಂಕ್ ಮಾಡೋ ಮೂಲಕ ಮತ್ತೆ ಮರಳಿದ ಇಂಟರ್ನೆಟ್ ಸೆನ್ಸೇಷನ್ ಕಿಲಿ ಪಾಲ್

Kili and Neema Paul singing Justin Bieber's Baby will hit you with a dose  of nostalgia. Viral video - Trending News Newsಒಂದು ವೇಳೆ ನೀವು ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದರೆ, ತಾಂಜೇನಿಯಾದ ಕಿಲಿ ಪಾಲ್ ಅವರ ವಿಡಿಯೋಗಳನ್ನು ನೋಡಿರುತ್ತೀರಾ. ಹಲವಾರು ಭಾರತೀಯ ಹಿಟ್ ಹಾಡುಗಳಿಗೆ ಡ್ಯಾನ್ಸ್ ಮಾಡುವುದರಿಂದ ಹಿಡಿದು ಡೈಲಾಗ್ ಗಳಿಗೆ ಲಿಪ್ ಸಿಂಕ್ ಮಾಡುವವರೆಗೆ ಇವರು ಫೇಮಸ್ ಆಗಿದ್ದಾರೆ. ಇದೀಗ ಇಂಟರ್ನೆಟ್ ಸೆನ್ಸೇಷನ್ ಕಿಲಿ ಪಾಲ್ ಆಸಕ್ತಿದಾಯಕ ವಿಡಿಯೋದೊಂದಿಗೆ ಮತ್ತೆ ಮರಳಿದ್ದಾರೆ.

ಹೌದು, ಕಿಲಿ ಪಾಲ್ ತಮ್ಮ ಸಹೋದರಿ ನೀಮಾ ಪಾಲ್ ಅವರೊಂದಿಗೆ ಜಸ್ಟಿನ್ ಬೈಬರ್ ಅವರ ಸೂಪರ್ ಹಿಟ್ ಹಾಡು ಬೇಬಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅದನ್ನು ಇಷ್ಟಪಟ್ಟಿದ್ದಾರೆ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ಕಿಲಿ ಪಾಲ್ ಉತ್ಸಾಹದಿಂದ ಕ್ರೇಜಿ ಹಿಟ್ ಹಾಡಿಗೆ ಲಿಪ್ ಸಿಂಕ್ ಮಾಡುವುದನ್ನು ಕಾಣಬಹುದು. ಅವರ ಸಹೋದರಿ ನೀಮಾ ಕೂಡ ಇದರಲ್ಲಿ ಸೇರಿಕೊಂಡಿದ್ದಾರೆ. ಸಾಂಪ್ರದಾಯಿಕ ಮಾಸಾಯಿ ಉಡುಪುಗಳನ್ನು ಧರಿಸಿರುವ ಸಹೋದರ-ಸಹೋದರಿ ಜೋಡಿಯು ಖಂಡಿತವಾಗಿಯೂ ನಿಮಗೆ ಇಷ್ಟವಾಗಬಲ್ಲದು.

ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವಿಡಿಯೋವನ್ನು 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ನೆಟ್ಟಿಗರು ಕಿಲಿ ಮತ್ತು ನೀಮಾ ಅವರ ಅಭಿನಯದ ಬಗೆಗೆ ತಮ್ಮ ಪ್ರೀತಿಯ ಧಾರೆ ಎರೆದಿದ್ದಾರೆ. ಕಾಮೆಂಟ್‌ ವಿಭಾಗವು ಹೃದಯ ಮತ್ತು ಬೆಂಕಿಯ ಎಮೋಜಿಗಳಿಂದ ತುಂಬಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...