alex Certify ಹೊಸ ಶೈಲಿಯ ‘ಜಿಲೇಬಿ ಚಾಟ್’ ಫೋಟೋ ನೋಡಿ ವ್ಯಾಕ್ ಅಂದ್ರು ನೆಟ್ಟಿಗರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಶೈಲಿಯ ‘ಜಿಲೇಬಿ ಚಾಟ್’ ಫೋಟೋ ನೋಡಿ ವ್ಯಾಕ್ ಅಂದ್ರು ನೆಟ್ಟಿಗರು..!

ವಿಲಕ್ಷಣವಾದ ಆಹಾರ ಸಂಯೋಜನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಹೊಸ ಟ್ರೆಂಡ್ ಆಗಿವೆ. ತಾವು ಇಂಟರ್ನೆಟ್ ನಲ್ಲಿ ವೈರಲ್ ಆಗಬೇಕೆಂಬ ತುಡಿತದಲ್ಲಿ ಕೆಲವರು, ನಮ್ಮ ನೆಚ್ಚಿನ ಭಕ್ಷ್ಯಗಳನ್ನು ವಿಭಿನ್ನವಾಗಿ ತಯಾರಿಸಿ ಗೊಂದಲ ಮೂಡಿಸುತ್ತಾರೆ. ಕೆಲವು ಖಾದ್ಯಗಳು ಪ್ರಯತ್ನಿಸಲು ಯೋಗ್ಯವಾಗಿದ್ದರೆ, ಇನ್ನೂ ಕೆಲವು ನೆಟ್ಟಿಗರಲ್ಲಿ ಕೋಪ ತರಿಸುತ್ತದೆ.

ಇದೀಗ ವಿಲಕ್ಷಣ ಆಹಾರ ಕ್ಲಬ್‌ಗೆ ಹೊಸ ಸೇರ್ಪಡೆಯೆಂದ್ರೆ ಜಿಲೇಬಿ ಚಾಟ್. ವೈರಲ್ ಆಗಿರುವ ಖಾದ್ಯದ ಚಿತ್ರದಲ್ಲಿ, ವ್ಯಕ್ತಿಯೊಬ್ಬರು ಜಿಲೇಬಿ, ಈರುಳ್ಳಿ, ಮೊಸರು, ಪಾಪ್ಡಿ ಬಳಸಿ ಚಾಟ್ ಮಾಡಿ ಅದನ್ನು ಸೇವ್ ಪುರಿಯಿಂದ ಅಲಂಕರಿಸಿದ್ದಾರೆ. ಜಲೇಬಿ ಚಾಟ್ ಅನ್ನು ಪ್ಲೇಟ್‌ನಲ್ಲಿ ಇರಿಸಲಾಗಿದ್ದು, ಸವಿಯಲು ಸಿದ್ಧವಾಗಿದೆ.

ಟ್ವಿಟ್ಟರ್ ಬಳಕೆದಾರ ಮಯೂರ್ ಸೆಜ್ಪಾಲ್ ಅವರು ಈ ವಿಲಕ್ಷಣ ಚಾಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ ಈ  ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅನೇಕ ಜನರು ವಿಲಕ್ಷಣವಾದ ಆಹಾರ ಸಂಯೋಜನೆಯಿಂದ ಅಸಹ್ಯಪಟ್ಟುಕೊಂಡಿದ್ದಾರೆ. ಇನ್ನು ಕೆಲವರು ಟ್ವಿಟ್ಟರ್ ನಲ್ಲಿ ಮೀಮ್ಸ್ ಗಳನ್ನು ಹರಿಬಿಟ್ಟಿದ್ದಾರೆ.

— Mayur Sejpal ?? (@mayursejpal) December 17, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...