
ಇದೀಗ ವಿಲಕ್ಷಣ ಆಹಾರ ಕ್ಲಬ್‌ಗೆ ಹೊಸ ಸೇರ್ಪಡೆಯೆಂದ್ರೆ ಜಿಲೇಬಿ ಚಾಟ್. ವೈರಲ್ ಆಗಿರುವ ಖಾದ್ಯದ ಚಿತ್ರದಲ್ಲಿ, ವ್ಯಕ್ತಿಯೊಬ್ಬರು ಜಿಲೇಬಿ, ಈರುಳ್ಳಿ, ಮೊಸರು, ಪಾಪ್ಡಿ ಬಳಸಿ ಚಾಟ್ ಮಾಡಿ ಅದನ್ನು ಸೇವ್ ಪುರಿಯಿಂದ ಅಲಂಕರಿಸಿದ್ದಾರೆ. ಜಲೇಬಿ ಚಾಟ್ ಅನ್ನು ಪ್ಲೇಟ್‌ನಲ್ಲಿ ಇರಿಸಲಾಗಿದ್ದು, ಸವಿಯಲು ಸಿದ್ಧವಾಗಿದೆ.
ಟ್ವಿಟ್ಟರ್ ಬಳಕೆದಾರ ಮಯೂರ್ ಸೆಜ್ಪಾಲ್ ಅವರು ಈ ವಿಲಕ್ಷಣ ಚಾಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ ಈ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅನೇಕ ಜನರು ವಿಲಕ್ಷಣವಾದ ಆಹಾರ ಸಂಯೋಜನೆಯಿಂದ ಅಸಹ್ಯಪಟ್ಟುಕೊಂಡಿದ್ದಾರೆ. ಇನ್ನು ಕೆಲವರು ಟ್ವಿಟ್ಟರ್ ನಲ್ಲಿ ಮೀಮ್ಸ್ ಗಳನ್ನು ಹರಿಬಿಟ್ಟಿದ್ದಾರೆ.