alex Certify ಹೊಸ ಕೆಲಸ ಆರಂಭಿಸುವ ಈ ರಾಶಿಯವರಿಗೆ ಇಂದು ಶುಭ ದಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಕೆಲಸ ಆರಂಭಿಸುವ ಈ ರಾಶಿಯವರಿಗೆ ಇಂದು ಶುಭ ದಿನ

ಮೇಷ : ಇಂದು ನಿಮಗೆ ಅನಿರೀಕ್ಷಿತ ಮೂಲದಿಂದ ಧನಲಾಭ ಕಾದಿದೆ. ಹೀಗಾಗಿ ನಿಮ್ಮ ಹಣಕಾಸಿನ ಸ್ಥಿತಿಯು ಇಂದು ಚೆನ್ನಾಗಿಯೇ ಇರಲಿದೆ. ಮಕ್ಕಳು ನಿಮಗೆ ಅತ್ಯಮೂಲ್ಯ ಉಡುಗೊರೆಯೊಂದನ್ನು ನೀಡಬಹುದು. ದೂರ ಪ್ರಯಾಣದ ಯೋಗವಿದೆ.

ವೃಷಭ : ತಾಯಿಯ ಚುಚ್ಚು ಮಾತುಗಳು ನಿಮ್ಮ ಮನಸ್ಸಿಗೆ ನೋವುಂಟು ಮಾಡಲಿದೆ. ಇದರಿಂದ ನೀವು ನೋವನ್ನು ಅನುಭವಿಸಲಿದ್ದೀರಿ. ಸಮಯ ಸಂದರ್ಭಗಳು ಎಲ್ಲವನ್ನೂ ಸರಿ ಮಾಡಲಿವೆ. ಆರ್ಥಿಕ ಸಂಕಷ್ಟಕ್ಕೆ ಸಹೋದರಿ ಸಹಾಯ ಮಾಡಲಿದ್ದಾರೆ.

ಟ್ರಾಫಿಕ್ ಪೊಲೀಸರು ವಾಹನದ ಕೀ ತೆಗೆದುಕೊಳ್ಳೋದು ಎಷ್ಟು ಸರಿ..? ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ

ಮಿಥುನ : ಸಮಾಜದಲ್ಲಿ ನಿಮ್ಮ ಪ್ರತಿಷ್ಟೆ ಹೆಚ್ಚುವಂತ ಕೆಲಸ ಮಾಡಲಿದ್ದೀರಿ. ಇದರಿಂದ ಪೋಷಕರು ಕೂಡ ನಿಮ್ಮ ಬಗ್ಗೆ ಹೆಮ್ಮೆ ವ್ಯಕ್ತಪಡಿಸಲಿದ್ದಾರೆ. ಸಂಗೀತಗಾರರ ಪಾಲಿಗೆ ಈ ದಿನ ಶುಭವಾಗಿದೆ. ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲಿದ್ದೀರಿ.

ಕಟಕ : ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಆದರೆ ಚಿಂತೆ ಬೇಡ. ಮನೆ ಮದ್ದಿನ ಮೂಲಕ ಮಕ್ಕಳಿಗೆ ಔಷಧಿ ನೀಡಿ. ವೃತ್ತಿ ಜೀವನದಲ್ಲಿ ಯಶಸ್ಸು ಇದೆ.

ಸಿಂಹ : ಅದೃಷ್ಟವು ನಿಮ್ಮ ಜೊತೆಯೇ ಇರಲಿದೆ. ಉದ್ಯೋಗಸ್ಥರಿಗೆ ಈ ದಿನ ಅನುಕೂಲಕಾರಿಯಾಗಿದೆ. ನಿಮಗಿಂತ ಕೆಳ ಹಂತದ ನೌಕರರ ಜೊತೆ ದರ್ಪ ಬೇಡ. ಅನ್ಯೋನ್ಯದಿಂದಲೇ ವರ್ತಿಸಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣಲಿದ್ದೀರಿ.

ಕನ್ಯಾ : ವೈವಾಹಿಕ ಸಂಬಂಧಕ್ಕೆ ಹುಡುಕಾಟ ನಡೆಸುತ್ತಿರುವ ನಿಮಗೆ ಇಂದು ಕಂಕಣ ಭಾಗ್ಯ ಕೂಡಿ ಬರಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದೆ. ಕುಟುಂಬ ಸದಸ್ಯರು ನಿಮ್ಮ ಹೊಸ ಯೋಜನೆಗಳಿಗೆ ಬೆಂಬಲ ನೀಡಲಿದ್ದಾರೆ.

ಡಿಸೆಂಬರ್ 31ರಂದು ‘ಹುಟ್ಟುಹಬ್ಬದ ಶುಭಾಶಯಗಳು’ ಬಿಡುಗಡೆ

ತುಲಾ : ದಾಂಪತ್ಯ ಜೀವನ ಸುಖಮಯವಾಗಿ ಇರಲಿದೆ. ಸಾರ್ವಜನಿಕ ಜೀವನದಲ್ಲಿ ಗೌರವವನ್ನು ಸಂಪಾದಿಸಲಿದ್ದೀರಿ. ಉದ್ಯೋಗ ಅರಸುತ್ತಿರುವವರಿಗೆ ಶುಭ ಸುದ್ದಿ ಕಾದಿದೆ. ಹೊಸ ಕೆಲಸ ಆರಂಭಿಸುವವರಿಗೆ ಈ ದಿನ ಶುಭಕಾರಿಯಾಗಿದೆ.

ವೃಶ್ಚಿಕ : ಭೂಮಿ ಖರೀದಿ ಮಾಡುವವರಿಗೆ ಈ ದಿನ ಶುಭಕಾರಿಯಾಗಿದೆ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು, ಮೇಲಾಧಿಕಾರಿಗಳ ಕಿರುಕುಳ ತಪ್ಪಿದ್ದಲ್ಲ. ಯಾವುದೇ ಹೊಸ ಕೆಲಸ ಆರಂಭಿಸಲು ಈ ದಿನ ಸೂಕ್ತವಾಗಿಲ್ಲ.

ಧನು : ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಈ ದಿನ ಶುಭಕಾರಿಯಾಗಿದೆ. ಮನೆಯಲ್ಲಿ ಚಿನ್ನಾಭರಣ ಖರೀದಿ ಮಾಡಲಿದ್ದೀರಿ. ಕುಟುಂಬಸ್ಥರ ಸಮೇತ ಶಿವನ ದೇಗುಲಕ್ಕೆ ಭೇಟಿ ಮಾಡಲಿದ್ದೀರಿ. ಆರ್ಥಿಕ ಲಾಭ ಕಾಣುವಿರಿ.

ಮಕರ : ನಿಮ್ಮ ವ್ಯಾಪಾರ- ವ್ಯವಹಾರಗಳ ವಿಚಾರದಲ್ಲಿ ತಂದೆಯು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಆರ್ಥಿಕ ವಿಚಾರವಾಗಿ ಸ್ನೇಹಿತರೊಂದಿಗೆ ಉಂಟಾಗಿದ್ದ ಮುನಿಸು ಕ್ರಮೇಣವಾಗಿ ಸುಧಾರಿಸಲಿದೆ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಅನಿವಾರ್ಯ.

ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ನಿಗೂಢ ಬೆಳಕು ಗೋಚರ…!

ಕುಂಭ : ಕಿರಿಯ ಸೋದರನ ಆರ್ಥಿಕ ಸಂಕಷ್ಟಕ್ಕೆ ನೀವು ಹೆಗಲಾಗಲಿದ್ದೀರಿ. ಇದು ನಿಮ್ಮ ಪೋಷಕರಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚಿಸಲಿದೆ. ಮನೆಗೆ ಪೀಠೋಪಕರಣಗಳನ್ನು ಖರೀದಿ ಮಾಡಲಿದ್ದೀರಿ. ನಿಮ್ಮ ವೈವಾಹಿಕ ಸಂಬಂಧದ ಬಗ್ಗೆ ಪೋಷಕರು ಚರ್ಚೆ ನಡೆಸಲಿದ್ದಾರೆ.

ಮೀನ : ವ್ಯಾಪಾರ- ವ್ಯವಹಾರದಲ್ಲಿ ನೀವು ಲಾಭವನ್ನು ಹೊಂದಲಿದ್ದೀರಿ. ಕಚೇರಿಯಲ್ಲಿ ಭಯಪಟ್ಟು ಕೆಲಸ ಮಾಡುವಂತಹ ಸನ್ನಿವೇಶ ಎದುರಾಗಲಿದೆ. ಹತ್ತಿರದ ಸಂಬಂಧಿಗಳ ಭೇಟಿ ಮನಸ್ಸಿಗೆ ಖುಷಿ ಎನಿಸಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...