ಸಿಂಪಲ್ ಆಗಿ ಮನೆಯಲ್ಲೇ ಫೇಶಿಯಲ್ ಮಾಡಿ ನೋಡಿ. ಕಡಿಮೆ ಖರ್ಚಿನಲ್ಲಿ ಉತ್ತಮ ಫಲಿತಾಂಶವೂ ದೊರಕುತ್ತದೆ. ಕೆಲವೇ ದಿನಗಳಲ್ಲಿ ಹೊಳೆಯುವ ತ್ವಚೆ ನಿಮ್ಮದಾಗಲಿದೆ.
ಒಂದು ಬೌಲ್ ಗೆ 3 ಟೀ ಸ್ಪೂನ್ ನಷ್ಟು ಹಾಲು ಹಾಕಿ ಇದಕ್ಕೆ 1 ಟೀ ಸ್ಪೂನ್ ಗ್ಲಿಸರಿನ್ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಮೊದಲಿಗೆ ನಿಮ್ಮ ಮುಖವನ್ನು ಫೇಸ್ ವಾಶ್ ಕ್ರೀಮ್ ನಿಂದ ತೊಳೆಯಿರಿ. ಬಳಿಕ ಹತ್ತಿ ಬಟ್ಟೆಯಲ್ಲಿ ಮುಖವನ್ನು ಚೆನ್ನಾಗಿ ಒರೆಸಿ. ನಂತರ ಚಿಕ್ಕ ಕಾಟನ್ ಬಟ್ಟೆಯ ತುಂಡನ್ನು ಹಾಲು, ಗ್ಲಿಸರಿನ್ ಮಾಡಿರುವ ಮಿಶ್ರಣಕ್ಕೆ ಅದ್ದಿ, ಮುಖಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. 2-3 ನಿಮಿಷಗಳ ನಂತರ ಮುಖ ತೊಳೆಯಿರಿ.
ಇದಾದ ನಂತರ ಒಂದು ಬೌಲ್ ಗೆ ಅರ್ಧ ಟೀ ಸ್ಪೂನ್ ಕಾಫಿ ಹುಡಿ, ಅರ್ಧ ಟೀ ಸ್ಪೂನ್ ಅಕ್ಕಿಹಿಟ್ಟು, ಅರ್ಧ ಟೀ ಸ್ಪೂನ್ ಜೇನುತುಪ್ಪ, ಒಂದು ಟೀ ಸ್ಪೂನ್ ನಷ್ಟು ನಿಂಬೆರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ 1 ಟೀ ಸ್ಪೂನ್ ಸಕ್ಕರೆ ಹುಡಿ ಹಾಕಿ ಮಿಕ್ಸ್ ಮಾಡಿ. ಬಳಿಕ ರೆಡಿ ಮಾಡಿದಂತಹ ಸ್ಕ್ರಬ್ ನ ಫೇಸ್ ಮೇಲೆ ಅಪ್ಲೈ ಮಾಡಿ. ಸರ್ಕ್ಯುಲರ್ ರೀತಿ ಸ್ಕ್ರಬ್ ಮಾಡಿಕೊಳ್ಳಿ. 5 ನಿಮಿಷ ಕಾಲ ನಿಧಾನವಾಗಿ ಸ್ಕ್ರಬ್ ಮಾಡಿಕೊಂಡು ಸ್ವಲ್ಪ ಹೊತ್ತು ಹಾಗೆ ಬಿಟ್ಟು ನಂತರ ಮುಖ ತೊಳೆಯಿರಿ. ವಾರದಲ್ಲಿ 2 ದಿನ ಈ ರೀತಿ ಮಾಡಿದರೆ ತ್ವಚೆಯ ಕಾಂತಿ ಹೆಚ್ಚುತ್ತದೆ.
ಸ್ಕ್ರಬ್ ಮಾಡಿದ ಬಳಿಕ ಸ್ಟೀಮ್ ತೆಗೆದುಕೊಳ್ಳಬೇಕು. ಬಿಸಿ ನೀರಿಗೆ 7 ರಿಂದ 8 ತುಳಸಿ ಎಲೆಗಳನ್ನು ಹಾಕಿ ಸ್ಟೀಮ್ ತೆಗೆದುಕೊಳ್ಳಿ. 5 ನಿಮಿಷ ಕಾಲ ಸ್ಟೀಮ್ ತೆಗೆದುಕೊಳ್ಳಿ, ಕಪ್ಪು ಕಲೆಗಳು, ಕಪ್ಪು ವರ್ತುಲಗಳನ್ನು ಹೋಗಲಾಡಿಸಲು ಇದು ಸಹಾಯಕಾರಿಯಾಗಿದೆ. ಸ್ಟೀಮ್ ತೆಗೆದುಕೊಂಡ ಬಳಿಕ ಕಾಟನ್ ಬಟ್ಟೆಯಲ್ಲಿ ಮುಖವನ್ನು ಚೆನ್ನಾಗಿ ಕ್ಲೀನ್ ಮಾಡಿ. ನಂತರ ಐಸ್ ಕ್ಯೂಬ್ ನಿಂದ 2 ನಿಮಿಷ ಕಾಲ ಮುಖವನ್ನು ಚೆನ್ನಾಗಿ ಮಸಾಜ್ ಮಾಡಿ.