ಹವಾಮಾನ ಬೇರೆ ಮಂಕಾಗಿದೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಚೈತನ್ಯ ಕೂಡ ಕುಂದಿರಬಹುದು.ಇಂತಹ ಸಂದರ್ಭದಲ್ಲಿ ನೀವು ಲವಲವಿಕೆಯಿಂದ ಇರಬೇಕೆಂದುಕೊಂಡಿದ್ದರೆ ನಿಮಗೊಂದು ವಿಡಿಯೋ ಕಾದಿದೆ. ಫ್ಯಾಶನ್ ಶೋಗಳಲ್ಲಿ ಯಾವೆಲ್ಲ ರೀತಿಯಲ್ಲಿ ಉಡುಪುಗಳನ್ನು ಧರಿಸುತ್ತಾರೆ ಎಂಬುದು ನಿಮಗೆ ತಿಳಿದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಶಹೀಲ್ ಶೆರ್ಮಾಂಟ್ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದು ವಿಚಿತ್ರ ವಸ್ತುಗಳನ್ನು ಹಿಡಿದು ವ್ಯಕ್ತಿಯು ಕ್ಯಾಟ್ ವಾಕ್ ಮಾಡಿರುವುದನ್ನು ಕಾಣಬಹುದು. ಈ ವಿಡಿಯೋ ನೆಟ್ಟಿಗರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ 24 ವರ್ಷದ ಶಹೀಲ್ ಎಂಬವರು ಸರಳವಾದ ಟೀ ಶರ್ಟ್ ಹಾಗೂ ಶಾರ್ಟ್ಸ್ ಧರಿಸಿದ್ದಾರೆ. ಫ್ಯಾಶನ್ ಶೋಗಳಲ್ಲಿ ಮಾಡೆಲ್ಗಳನ್ನು ರ್ಯಾಂಪ್ ವಾಕ್ ನ್ನು ಮರುಸೃಷ್ಟಿಸಿದ ಶಹೀಲ್, ಶೆಡ್, ವಾಕರ್, ಶೀಟು ಸೇರಿದಂತೆ ವಿಚಿತ್ರ ವಸ್ತುಗಳನ್ನು ಹಿಡಿದು ರ್ಯಾಂಪ್ ವಾಕ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.