ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಮುಂಬೈ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 31 ವರ್ಷದ ಬ್ಯಾಂಕ್ ಉದ್ಯೋಗಿ ಮಾರ್ಚ್ 2015 ರಲ್ಲಿ ಲೈಂಗಿಕ ಕಾರ್ಯಕರ್ತೆಯೊಬ್ಬರನ್ನು ಕೊಂದ ಆರೋಪ ಹೊತ್ತಿದ್ದರು.
ಆತ ಆಕೆ ಬಳಿಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರು, ಆದರೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಆಕೆಯ ಅನ್ಯೋನ್ಯತೆಯ ಬಗ್ಗೆ ತಿಳಿದ ನಂತರ ಹೊಟ್ಟೆಕಿಚ್ಚು ಹೊಂದಿ ಹತ್ಯೆ ಮಾಡಿದ್ದಾನೆ.
ಕನ್ಯಾಕುಮಾರಿ ನಿವಾಸಿ ಕುಮಾರನ್ ಕೋನಾರ್ (31) ಅಪರಾಧಿಯಾಗಿದ್ದು, ಆತ ನಿಯಮಿತವಾಗಿ ಭೇಟಿ ನೀಡಿ ಸಂತ್ರಸ್ತೆಯ ಜೊತೆ ಇರುತ್ತಿದ್ದ. ಮೃತ ಮಹಿಳೆ ಬೇರೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದು, ಅದು ಕೋನಾರ್ ಅವರಿಗೆ ಇಷ್ಟವಿರಲಿಲ್ಲ ಎಂದು ಪ್ರಾಸಿಕ್ಯೂಷನ್ ಹೇಳಿದೆ.
ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಮಾಜಿ ಶಾಸಕ ವಶಕ್ಕೆ
ಪರ ಪುರುಷನೊಂದಿಗಿನ ಸಂಬಂಧದ ಬಗ್ಗೆ ಕೋನಾರ್ ಆಗಾಗ್ಗೆ ಅವಳೊಂದಿಗೆ ಜಗಳವಾಡುತ್ತಿದ್ದ ಎಂದು ಕೋರ್ಟ್ ವಾದದ ವೇಳೆ ಪ್ರಸ್ತಾಪವಾಗಿದೆ.
2015 ಮಾರ್ಚ್ 31 ರಂದು ಆಕೆಯು ದಕ್ಷಿಣ ಮುಂಬೈನ ನಾಗ್ಪಾಡಾ ಜಂಕ್ಷನ್‌ನಲ್ಲಿರುವ ಅಲೆಕ್ಸಾಂಡ್ರಾ ಥಿಯೇಟರ್ ಬಳಿ ರಾತ್ರಿ 9.15ರ ಸುಮಾರಿಗೆ ನಿಂತಿದ್ದಾಗ, ಕೋನಾರ್ ಅವರ ಹಿಂದಿನಿಂದ ಬಂದು ಆಕೆಯ ಕೈಗಳನ್ನು ಹಿಡಿದು ಕತ್ತು ಸೀಳಿ ಸ್ಥಳದಿಂದ ಪರಾರಿಯಾಗಿದ್ದ.
ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ನಾಗ್ಪಾಡಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಮರುದಿನವೆ ಮುಂಬೈ ಸೆಂಟ್ರಲ್ ರೈಲು ನಿಲ್ದಾಣದಿಂದ ಕೋನಾರ್‌ನನ್ನು ಬಂಧಿಸಲಾಗಿತ್ತು.
ಪಬ್ಲಿಕ್ ಪ್ರಾಸಿಕ್ಯೂಟರ್ ರತ್ನಾವಲಿ ಪಾಟೀಲ್ ಇಬ್ಬರು ಪ್ರತ್ಯಕ್ಷದರ್ಶಿ ಸೇರಿ 12 ಸಾಕ್ಷಿಗಳನ್ನು ಪರಿಶೀಲಿಸಿದ್ದು, ಅವರೆಲ್ಲರೂ ಮೃತಳ ಜತೆ ನಿಂತಿದ್ದರು ಮತ್ತು ಘಟನೆಯ ಸಮಯದಲ್ಲಿ ಚಿಟ್ ಚಾಟ್ ಮಾಡಿದ್ದರು ಎಂಬುದು ಖಾತ್ರಿಯಾದ ನಂತರ ಈ ತೀರ್ಪು ನೀಡಿದ್ದಾರೆ.
15 ಮತ್ತು 8 ವರ್ಷದ ಇಬ್ಬರು ಮಕ್ಕಳಿರುವ ವಿವಾಹಿತ ಕೋನಾರ್ ಪ್ರಕರಣದಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ವಿಚಾರಣೆಯ ಸಮಯದಲ್ಲಿ ಹೇಳಿಕೊಂಡಿದ್ದ.