ಹೊಟೇಲ್ ನಲ್ಲಿ ಉಳಿದುಕೊಳ್ಳುವುದು ಕೆಲವರಿಗೆ ಅನಿವಾರ್ಯವಾದ್ರೆ ಮತ್ತೆ ಕೆಲವರು ಇಷ್ಟಪಟ್ಟು ಹೊಟೇಲ್ ರೂಂ ಬುಕ್ ಮಾಡ್ತಾರೆ. ಎಲ್ಲ ಹೊಟೇಲ್ ಗಳು ಒಂದೇ ರೀತಿ ಇರುವುದಿಲ್ಲ. ಕೆಲ ಹೊಟೇಲ್ ಸ್ವಚ್ಛತೆಗೆ ಬಗ್ಗೆ ಗಮನ ನೀಡಿದ್ರೆ ಮತ್ತೆ ಕೆಲ ಹೊಟೇಲ್ ಕ್ಲೀನ್ ಇರುವುದಿಲ್ಲ.
ಫೈವ್ ಸ್ಟಾರ್ ಹೊಟೇಲ್ ನಲ್ಲಿ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತದೆ. ಆದ್ರೆ ಸಾಮಾನ್ಯ ಹೊಟೇಲ್ ಗಳಲ್ಲಿ ಸ್ವಚ್ಛತೆ ಬಗ್ಗೆ ಅಷ್ಟಾಗಿ ಗಮನ ನೀಡುವುದಿಲ್ಲ. ನೀವು ಕಡಿಮೆ ಬೆಲೆಯ ಹೊಟೇಲ್ ನಲ್ಲಿ ರೂಂ ಬುಕ್ ಮಾಡುವುದಾದ್ರೆ ನಾವು ಹೇಳುವು ಕೆಲವೊಂದು ನಿಯಮಗಳನ್ನು ತಪ್ಪದೆ ಪಾಲಿಸಿ.
ಮೊದಲನೇಯದಾಗಿ ಹೊಟೇಲ್ ರೂಂನಲ್ಲಿರುವ ಫೋನ್, ರಿಮೋಟ್, ಮೆನುಗಳನ್ನು ಮೊದಲು ಮುಟ್ಟದೆ ಇರುವುದೇ ಒಳ್ಳೆಯದು. ಟೆಲಿಫೋನ್ ಸೇರಿದಂತೆ ರಿಮೋಟ್ ನಂತಹ ವಸ್ತುಗಳನ್ನು ಹೊಟೇಲ್ ನಲ್ಲಿ ಕ್ಲೀನ್ ಮಾಡುವುದಿಲ್ಲ. ಅದ್ರಲ್ಲಿ ಕೀಟಾಣುಗಳು ಜಾಸ್ತಿ ಇರುತ್ತವೆ. ಹಾಗಾಗಿ ಹೊಟೇಲ್ ನಲ್ಲಿ ರೂಂ ಬುಕ್ ಮಾಡಿದ ತಕ್ಷಣ ಅವುಗಳನ್ನು ಸ್ವಚ್ಛಗೊಳಿಸಿಕೊಳ್ಳಿ.
ಮುಂದಿನ ಬಾರಿ ಹೊಟೇಲ್ ಗೆ ಹೋಗುವಾಗ ಬೆಡ್ ಶೀಟ್ ಹಾಗೂ ಹೊದಿಕೆಯನ್ನು ತಪ್ಪದೆ ತೆಗೆದುಕೊಂಡು ಹೋಗಿ. ವರದಿಯೊಂದರ ಪ್ರಕಾರ ವರ್ಷದಲ್ಲಿ ಕೇವಲ ನಾಲ್ಕು ಬಾರಿ ಮಾತ್ರ ಹೊಟೇಲ್ ರೂಂ ಗಳ ಬೆಡ್ ಶೀಟ್ ಗಳನ್ನು ಬದಲಿಸಲಾಗುತ್ತದೆಯಂತೆ. ಅದ್ರಲ್ಲಿ ಯಾರ್ಯಾರೋ ಮಲಗಿರುತ್ತಾರೆ. ಏನೇನೋ ಮಾಡಿರುತ್ತಾರೆ. ಹಾಗಾಗಿ ನಿಮ್ಮದೆ ಬೆಡ್ ಶೀಟ್ ತೆಗೆದುಕೊಂಡು ಹೋಗುವುದು ಒಳ್ಳೆಯದು.
ದಿಂಬಿನ ಕವರ್ ಕೂಡ ಹೊಟೇಲ್ ನಲ್ಲಿ ತೊಳೆಯುವುದಿಲ್ಲ. ಸುಮ್ಮನೆ ಧೂಳು ಕೊಡವಿ ಹಾಗೆಯೇ ಇಡುತ್ತಾರೆ. ಹಾಗಾಗಿ ರೂಂ ಗೆ ಹೋದ ತಕ್ಷಣ ದಿಂಬಿನ ಕವರ್ ಬದಲಾಯಿಸಿ.
ರೂಂ ನಲ್ಲಿರುವ ಗ್ಲಾಸ್ ಹಾಗೂ ಮಗ್ ಗಳನ್ನು ಸರಿಯಾಗಿ ತೊಳೆಯುವುದಿಲ್ಲ. ಕೆಲವೊಂದು ಹೊಟೇಲ್ ನಲ್ಲಿ ಅದನ್ನು ಹಾಗೆಯೇ ಇಟ್ಟರೆ ಮತ್ತೆ ಕೆಲವು ಹೊಟೇಲ್ ನಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಡಿಟರ್ಜೆಂಟ್ ನಿಂದ ಸ್ವಚ್ಛಗೊಳಿಸುತ್ತಾರೆ. ಹಾಗಾಗಿ ಹೊಟೇಲ್ ರೂಂ ಗೆ ಹೋಗುವ ಮುನ್ನ ಯೂಸ್ ಅಂಡ್ ಥ್ರೋ ಗ್ಲಾಸ್ ತೆಗೆದುಕೊಂಡು ಹೋಗುವುದು ಒಳ್ಳೆಯದು.