alex Certify ಹೊಚ್ಚ ಹೊಸ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ ಗ್ರಾಹಕನಿಗೆ ನಿರಾಸೆ; ಕೋಪಗೊಂಡ ಆತ ಮಾಡಿದ್ದೇನು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಚ್ಚ ಹೊಸ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ ಗ್ರಾಹಕನಿಗೆ ನಿರಾಸೆ; ಕೋಪಗೊಂಡ ಆತ ಮಾಡಿದ್ದೇನು ಗೊತ್ತಾ..?

ಓಲಾ ಸೇವೆಯಿಂದ ಮನನೊಂದ ಮಹಾರಾಷ್ಟ್ರದ ಪರ್ಲಿ ವೈಜನಾಥ ಎಂಬಲ್ಲಿ ವ್ಯಕ್ತಿಯೊಬ್ಬರು ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕತ್ತೆಗೆ ಹಗ್ಗದಿಂದ ಕಟ್ಟಿ ಊರಿನಲ್ಲಿ ಮೆರವಣಿಗೆ ಮಾಡಿದ್ದಾರೆ.

ವ್ಯಕ್ತಿಯನ್ನು ಸಚಿನ್ ಗಿಟ್ಟೆ ಎಂದು ಗುರುತಿಸಲಾಗಿದೆ. ದೋಷಪೂರಿತ ಇ-ಸ್ಕೂಟರ್‌ ಅನ್ನು ಕತ್ತೆಗೆ ಕಟ್ಟಿ, ಓಲಾ ಕಂಪನಿಯನ್ನು ನಂಬಬೇಡಿ ಎಂದು ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳೊಂದಿಗೆ ಭಾನುವಾರ ಬೀಡಿನ ಸುತ್ತಲೂ ಮೆರವಣಿಗೆ ನಡೆಸಿದ್ದಾರೆ. ವಾಹನವನ್ನು ತೆಗೆದುಕೊಂಡ ಕೇವಲ 15 ದಿನಗಳ ನಂತರ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಆದರೂ, ಅದರ ದೋಷವನ್ನು ಸರಿಪಡಿಸದ ತಯಾರಕರ ವಿರುದ್ಧ ಇದು ಪ್ರತಿಭಟನೆಯ ಸಂಕೇತವಾಗಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 20,000 ರೂಪಾಯಿ ಪಾವತಿಸಿ ಗಿಟ್ಟೆ ಬ್ಯಾಟರಿ ಚಾಲಿತ ಸ್ಕೂಟರ್ ಅನ್ನು ಬುಕ್ ಮಾಡಿದ್ದರು. ಜನವರಿ 21, 2022 ರಂದು, ಅವರು ಉಳಿದ 65,000 ರೂಗಳನ್ನು ಪಾವತಿಸಿದ್ದಾರೆ. ಮಾರ್ಚ್ 24 ರಂದು ಸ್ಕೂಟರ್‌ ಅನ್ನು ಪಡೆದಿದ್ದಾರೆ. ಆದರೆ, ಕೆಲವೇ ದಿನಗಳಲ್ಲಿ ಸ್ಕೂಟರ್ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಗಿಟ್ಟೆ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಿದ್ದಾರೆ. ವಾಹನವನ್ನು ಮೆಕ್ಯಾನಿಕ್ ಪರಿಶೀಲಿಸಿದ್ರೂ ಅದನ್ನು ಸರಿಪಡಿಸಲಾಗಿಲ್ಲ. ಅವರ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಇದೀಗ ಅವರು ವಿಶಿಷ್ಟ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಅವರು ಗ್ರಾಹಕ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.

ಕಾರ್ಪೊರೇಟ್ ಹೇಳಿಕೆಯ ಪ್ರಕಾರ, ವಾಹನಗಳಿಗೆ ಬೆಂಕಿ ಹೊತ್ತಿಕೊಂಡ ಪ್ರಕರಣಗಳಿಂದಾಗಿ ಓಲಾ ಎಲೆಕ್ಟ್ರಿಕ್ ತನ್ನ 1,441 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಶನಿವಾರ ಹಿಂಪಡೆದಿದೆ ಎನ್ನಲಾಗಿದೆ.

https://www.youtube.com/watch?v=5dZphYtIygQ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...