ದೀಪಾವಳಿಗೂ ಮುನ್ನ ಹೈನುಗಾರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಪಶು ಆಹಾರ ಧಾರಣೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ಕರ್ನಾಟಕ ಹಾಲು ಮಹಾ ಮಂಡಳಿ ಅಕ್ಟೋಬರ್ 19 ರಂದು ಈ ಕುರಿತು ಆದೇಶ ಹೊರಡಿಸಿದೆ.
50 ಕೆಜಿ ನಂದಿನಿ ಗೋಲ್ಡ್ ಪಶು ಆಹಾರದ ಬೆಲೆಯನ್ನು 1,040 ರೂಪಾಯಿಗಳಿಂದ 1,165 ರೂಪಾಯಿಗಳಿಗೆ ಹೆಚ್ಚಿಸಲಾಗಿದ್ದರೆ, ಬೈಪಾಸ್ ಪಶು ಆಹಾರದ ಬೆಲೆಯನ್ನು 1,160 ರೂಪಾಯಿಗಳಿಂದ 1,285 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.
ಹಾಲಿನ ಬೆಲೆಯನ್ನು ಹೆಚ್ಚಿಸುವಂತೆ ಹೈನುಗಾರರು ಈ ಮೊದಲಿನಿಂದಲೂ ಮನವಿ ಮಾಡಿಕೊಂಡು ಬಂದಿದ್ದು, ಆದರೆ ಈ ಕುರಿತು ಈವರೆಗೆ ಯಾವುದೇ ನಿರ್ಧಾರ ಕೈಗೊಳ್ಳದಿರುವುದರ ಮಧ್ಯೆ ಇದೀಗ ಪಶು ಆಹಾರದ ಬೆಲೆ ಹೆಚ್ಚಿಸಿರುವುದು ಹೈನುಗಾರರಿಗೆ ಶಾಕ್ ನೀಡಿದೆ.