![](https://kannadadunia.com/wp-content/uploads/2018/07/chain-snatching-incident-in-bus-55e05bde596f0_l_835x547.jpg)
ಈ ವ್ಯಕ್ತಿ ನಗರಕ್ಕೆ ಹೇಗೆ ಬರುತ್ತಾನೆ ? ಎಲ್ಲಿಂದ ಬಂದು ತನ್ನ ಕೈಚಳಕ ತೋರಿಸಿ ಹೇಗೆ ಪರಾರಿಯಾಗುತ್ತಾನೆ ಎಂಬುವುದೇ ಪೊಲೀಸರಿಗೆ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ.
ಹೀಗೆ ಜನರಿಗೆ ಹಾಗೂ ಪೊಲೀಸರಿಗೆ ತಲೆನೋವಾಗಿರುವ ಈ ವ್ಯಕ್ತಿ ಬಂಧಿಸಲು 200 ಕ್ಕೂ ಹೆಚ್ಚು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಆದರೂ ಮಾತ್ರ ಈ ವ್ಯಕ್ತಿ ಬಲೆಗೆ ಬೀಳುತ್ತಿಲ್ಲ. ಈ ವ್ಯಕ್ತಿ ಎಲ್ಲೆಂದರಲ್ಲಿ ತನ್ನ ಕೈ ಚಳಕ ತೋರಿಸುತ್ತ, ಸರಗಳ್ಳತನ ಮಾಡುತ್ತ ಪರಾರಿಯಾಗುತ್ತಿದ್ದಾನೆ. ಹಲವು ದಿನಗಳಿಂದಲೂ ಈ ಕಳ್ಳನು ಪೊಲೀಸರಿಗೆ ಈ ರೀತಿ ಯಾಮಾರಿಸುತ್ತ ಹೋಗುತ್ತಿದ್ದಾನೆ.
ಹೈದರಾಬಾದ್ ನಗರದ ಮೂರು ಕಮೀಷನರೇಟ್ ವ್ಯಾಪ್ತಿಯಲ್ಲಿನ ಪ್ರದೇಶದಲ್ಲಿಯೇ ಈ ಖತರ್ನಾಕ್ ಕಳ್ಳ ತನ್ನ ಕೈ ಚಳಕ ತೋರಿಸಿದ್ದಾನೆ. ಹೀಗಾಗಿಯೇ ಈತನನ್ನು ಬಂಧಿಸುವುದಕ್ಕಾಗಿ ಪೊಲೀಸರ ತಂಡ ರಚಿಸಿದ್ದಾರೆ.
ಸುಮಾರು 200 ಜನ ಪೊಲೀಸರು ಈ ಕಳ್ಳನಿಗಾಗಿ ಮೈಯೆಲ್ಲ ಕಣ್ಣು ಮಾಡಿಕೊಂಡು ಹುಡುಕಾಟ ನಡೆಸಿದ್ದಾರೆ. ಅಲ್ಲಿನ ಸಿಸಿ ಟಿವಿ ಆಧಾರದ ಮೇಲೆ ಆತನಿಗಾಗಿ ಬಲೆ ಬೀಸಲು ಸಿದ್ಧತೆ ನಡೆಸಿದ್ದಾರೆ.