ಬೆಂಗಳೂರು: ಈಗಲ್ ಟನ್ ರೆಸಾರ್ಟ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಹೈಡ್ರೋ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಇರಾನಿ ಪ್ರಜೆಗಳಾಗಿದ್ದ ವಿದ್ಯಾರ್ಥಿಗಳು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರು ಈಗಲ್ ಟನ್ ರೆಸಾರ್ಟ್ ನ ವಿಲ್ಲಾದಲ್ಲಿದ್ದುಕೊಂಡೇ ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ ವಿದೇಶಗಳಿಂದ ಹೈಬ್ರೀಡ್ ಗಾಂಜಾ ಬೀಜಗಳನ್ನು ತಂದು ಹೈಡ್ರೋ ಗಾಂಜಾ ಬೆಳೆಯುತ್ತಿದ್ದುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಗೋಗಿ ಹತ್ಯೆ ಬಳಿಕ ಸೋಶಿಯಲ್ ಮೀಡಿಯಾಕ್ಕೂ ಕಾಲಿಟ್ಟ ʼಗ್ಯಾಂಗ್ ವಾರ್ʼ
ಪ್ರಮುಖ ಆರೋಪಿ ಜಾವೇದ್, ವಿಲ್ಲಾದಲ್ಲೇ ಹೈಡ್ರೋ ಗಾಂಜಾ ಗಿಡಗಳನ್ನು ಬೆಳೆಸಿದ್ದ. ಎಜುಕೇಷನ್ ಗಾಗಿ ವಿದ್ಯಾರ್ಥಿ ವೀಸಾದಲ್ಲಿ ಬೆಂಗಳೂರಿಗೆ ಬಂದಿದ್ದ ಜಾವೇದ್ ವೆಬ್ ಸೈಟ್ ಮೂಲಕ ಗಾಂಜಾ ಗಿಡ ಬೆಳೆಯುವ ಬಗ್ಗೆ ಮಾಹಿತಿ ಪಡೆದಿದ್ದ. ಆರಂಭದಲ್ಲಿ ಬಾಣಸವಾಡಿ ವ್ಯಾಪ್ತಿಯ ಕಮ್ಮನಹಳ್ಳಿಯಲ್ಲಿ ಗಾಂಜಾ ಗಿಡ ಬೆಳೆದು ಯಶಸ್ವಿಯಾಗಿ ಬಳಿಕ ಈಗಲ್ ಟನ್ ವಿಲ್ಲಾಗೆ ಶಿಫ್ಟ್ ಆಗಿ ಅಲ್ಲಿಯೇ ಗಾಂಜಾ ಗಿಡ ಬೆಳೆಯುತ್ತಿದ್ದ. ರೆಸಾರ್ಟ್ ಗೆ ಬರುತ್ತಿದ್ದ ಉದ್ಯಮಿಗಳು, ಟೆಕ್ಕಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದುದಾಗಿ ಹೇಳಿದ್ದಾನೆ ಎನ್ನಲಾಗಿದೆ.
ಬಂಧಿತ ನಾಲ್ವರಿಂದ ಬರೋಬ್ಬರಿ 150 ಹೈಡ್ರೋ ಗಾಂಜಾ ಗಿಡಗಳು, 2 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶಕ್ಕೆ ಪಡೆಯಲಾಗಿದೆ.