alex Certify ಹೆಸರು ಬೇಳೆ ʼದೋಸೆʼ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಸರು ಬೇಳೆ ʼದೋಸೆʼ ಮಾಡುವ ವಿಧಾನ

ಬೆಳಿಗ್ಗೆ ದಿನಾ ಇಡ್ಲಿ, ದೋಸೆ ತಿಂದು ಬೇಜಾರು ಎನ್ನುವವರು ಒಮ್ಮೆ ಈ ಹೆಸರು ಬೇಳೆ ದೋಸೆ ಮಾಡಿಕೊಂಡು ತಿನ್ನಿರಿ. ತೂಕ ಇಳಿಸಿಕೊಳ್ಳುವವರಿಗೆ ಕೂಡ ಇದು ಸಹಾಯಕಾರಿಯಾಗಿದೆ.

ಬೇಕಾಗುವ ಸಾಮಗ್ರಿಗಳು:

1 ಕಪ್-ಹೆಸರು ಬೇಳೆ, 2 ಕಪ್- ನೀರು, ¼ ಕಪ್-ರುಬ್ಬಲು ನೀರು, ¼ ಟೀ ಸ್ಪೂನ್-ಅರಿಶಿನ, ¼ ಸ್ಪೂನ್ -ಖಾರದ ಪುಡಿ, ½ ಟೀ ಸ್ಪೂನ್-ಜೀರಿಗೆ ಪುಡಿ, ಇಂಗು-ಚಿಟಿಕೆ, ¼ ಕಪ್-ಕೊತ್ತಂಬರಿಸೊಪ್ಪು, ¼ ಕಪ್- ಸಣ್ಣಗೆ ಹಚ್ಚಿದ ಈರುಳ್ಳಿ, 1 ಟೀ ಸ್ಪೂನ್-ಶುಂಠಿ ತುರಿ, 2-ಹಸಿಮೆಣಸು, ರುಚಿಗ ತಕ್ಕಷ್ಟು ಉಪ್ಪು, 2 ಟೇಬಲ್ ಸ್ಪೂನ್- ಎಣ್ಣೆ.

ಮಾಡುವ ವಿಧಾನ:

ಮೊದಲಿಗೆ ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು 4 ಗಂಟೆಗಳ ಕಾಲ ನೆನೆಸಿಡಿ. ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ¼ ಕಪ್ ನೀರು ಹಾಕಿ ನಯವಾಗಿ ರುಬ್ಬಿಕೊಳ್ಳಿ. ನಂತರ ಇದನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಅರಿಶಿನ, ಖಾರದಪುಡಿ, ಜೀರಿಗೆ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಈರುಳ್ಳಿ, ಕೊತ್ತಂಬರಿ ಸೊಪ್ಪು, ಶುಂಠಿ ಉರಿ ಹಸಿಮೆಣಸು, ಇಂಗು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 20 ನಿಮಿಷಗಳ ಕಾಲ ಹಾಗೇಯೇ ಬಿಡಿ.

ಈ ಹಿಟ್ಟು ತುಂಬಾ ದಪ್ಪಗಾಗಿದ್ದರೆ 3 ಟೇಬಲ್ ಸ್ಪೂನ್ ನಷ್ಟು ನೀರು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ತವಾ ಇಟ್ಟು ಎಣ್ಣೆ ಹಾಕಿ ಆಮೇಲೆ ಈ ದೋಸೆ ಹಿಟ್ಟನ್ನು ಹಾಕಿ ದೋಸೆ ಮಾಡಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...