ಮೊದಲಿಗೆ ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು 4 ಗಂಟೆಗಳ ಕಾಲ ನೆನೆಸಿಡಿ. ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ¼ ಕಪ್ ನೀರು ಹಾಕಿ ನಯವಾಗಿ ರುಬ್ಬಿಕೊಳ್ಳಿ. ನಂತರ ಇದನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಅರಿಶಿನ, ಖಾರದಪುಡಿ, ಜೀರಿಗೆ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಈರುಳ್ಳಿ, ಕೊತ್ತಂಬರಿ ಸೊಪ್ಪು, ಶುಂಠಿ ಉರಿ ಹಸಿಮೆಣಸು, ಇಂಗು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 20 ನಿಮಿಷಗಳ ಕಾಲ ಹಾಗೇಯೇ ಬಿಡಿ.
ಈ ಹಿಟ್ಟು ತುಂಬಾ ದಪ್ಪಗಾಗಿದ್ದರೆ 3 ಟೇಬಲ್ ಸ್ಪೂನ್ ನಷ್ಟು ನೀರು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ತವಾ ಇಟ್ಟು ಎಣ್ಣೆ ಹಾಕಿ ಆಮೇಲೆ ಈ ದೋಸೆ ಹಿಟ್ಟನ್ನು ಹಾಕಿ ದೋಸೆ ಮಾಡಿಕೊಳ್ಳಿ.