ಬೇಕಾಗುವ ಸಾಮಾಗ್ರಿಗಳು :
ಹಸಿಮೆಣಸಿನಕಾಯಿ – 2, ಶುಂಠಿ – ಒಂದು ಇಂಚು, ಹೆಸರುಬೇಳೆ – 1 ಕಪ್
ಮಾಡುವ ವಿಧಾನ: ಒಂದು ಮಿಕ್ಸಿ ಜಾರಿಗೆ ಎರಡು ಹಸಿಮೆಣಸಿನಕಾಯಿ, ಒಂದು ಇಂಚು ಶುಂಠಿ, 2 ಗಂಟೆ ನೆನೆಸಿದ 1 ಕಪ್ ಹೆಸರುಬೇಳೆ ಹಾಕಿ ರುಚಿಗೆ ತಕ್ಕಷ್ಚು ಉಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ.
ಹಲಸಿನಕಾಯಿ ಚಿಪ್ಸ್ ಮಾಡುವ ವಿಧಾನ
ದೋಸೆ ಹಿಟ್ಟಿನ ಹದ ಇರಲಿ. ಜಾಸ್ತಿ ದಪ್ಪವೂ ಬೇಡ, ಜಾಸ್ತಿ ತೆಳ್ಳವೂ ಬೇಡ. ಬಳಿಕ ತವಾಗೆ ಎಣ್ಣೆ ಅಥವಾ ತುಪ್ಪ ಸವರಿಕೊಂಡು ಮಸಾಲೆದೋಸೆ ತರಹ ಹುಯ್ಯಿರಿ. ದೋಸೆ ಬೆಂದ ಕೂಡಲೇ ಮಗುಚಿ ಹಾಕಿ ಚೆನ್ನಾಗಿ ಬೇಯಿಸಿ ಸರ್ವಿಂಗ್ ಪ್ಲೇಟ್ ಗೆ ಹಾಕಿದರೆ ಸವಿಯಲು ಹೆಸರುಬೇಳೆ ದೋಸೆ ರೆಡಿ.