alex Certify ಮೊಳಕೆ ಹೆಸರುಕಾಳಿನ ಪಲ್ಯ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಳಕೆ ಹೆಸರುಕಾಳಿನ ಪಲ್ಯ ಮಾಡುವ ವಿಧಾನ

ಹೆಸರುಕಾಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಮೊಳಕೆ ಬರಿಸಿ ಪಲ್ಯ ಮಾಡಿದರೆ ತುಂಬಾ ರುಚಿಕರವಾಗಿರುತ್ತದೆ. ಚಪಾತಿ, ಅನ್ನದ ಜತೆ ಇದು ಸಖತ್ ಆಗಿರುತ್ತದೆ.

2 ಕಪ್ ಮೊಳಕೆ ಬರಿಸಿಕೊಂಡ ಹೆಸರುಕಾಳನ್ನು ಒಂದು ಪಾತ್ರೆಗೆ ಹಾಕಿಕೊಂಡು ಅದಕ್ಕೆ 3 ಟೇಬಲ್ ಸ್ಪೂನ್ ನೀರು ಸೇರಿಸಿಕೊಂಡು ಕುಕ್ಕರ್ ಒಳಗಡೆ ಇಟ್ಟು 2 ವಿಷಲ್ ಕೂಗಿಸಿಕೊಳ್ಳಿ. ನಂತರ ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ 1 ಟೀ ಸ್ಪೂನ್ ಸಾಸಿವೆ, ಚಿಟಿಕೆ ಇಂಗು, 1 ಒಣಮೆಣಸು, ಕರಿಬೇವು ಹಾಕಿ ನಂತರ ಇದಕ್ಕೆ ಬೇಯಿಸಿಕೊಂಡ ಹೆಸರುಕಾಳು ಸೇರಿಸಿಕೊಂಡು 3 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿ.

ಮಿಕ್ಸಿ ಜಾರಿಗೆ 3 ಟೇಬಲ್ ಸ್ಪೂನ್ ನಷ್ಟು ತೆಂಗಿನಕಾಯಿ ತುರಿ, 1 ಟೀ ಸ್ಪೂನ್ ಜೀರಿಗೆ, 2 ಹಸಿಮೆಣಸು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ಇದನ್ನು ಹೆಸರುಕಾಳಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ 2 ನಿಮಿಷಗಳ ಕಾಲ ಬೇಯಿಸಿಕೊಂಡು ಗ್ಯಾಸ್ ಆಫ್ ಮಾಡಿ. ರುಚಿಕರವಾದ ಹೆಸರುಕಾಳು ಪಲ್ಯ ಸವಿಯಲು ಸಿದ್ಧ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...