alex Certify ಹೆಬ್ಬಾವಿನೊಂದಿಗೆ ಈ ಬಾಲಕಿಯ ಆಟ; 5.1 ಮಿಲಿಯನ್ ವೀಕ್ಷಣೆ ಗಳಿಸಿದೆ ಬೆಚ್ಚಿಬೀಳಿಸುವ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಬ್ಬಾವಿನೊಂದಿಗೆ ಈ ಬಾಲಕಿಯ ಆಟ; 5.1 ಮಿಲಿಯನ್ ವೀಕ್ಷಣೆ ಗಳಿಸಿದೆ ಬೆಚ್ಚಿಬೀಳಿಸುವ ವಿಡಿಯೋ

ಕೆಲವರಿಗೆ ಹಾವುಗಳನ್ನು ಕಂಡ್ರೆ ಸಾಕು ಭಯದಿಂದ ಬೆವರಲು ಶುರುವಾಗುತ್ತದೆ. ಆದರೆ, ಇನ್ನೂ ಕೆಲವರಿಗೆ ಹಾವುಗಳೆಂದ್ರೆ ಸ್ವಲ್ಪನೂ ಭಯ ಇಲ್ಲ. ಅವುಗಳನ್ನು ಸಾಕುಪ್ರಾಣಿಗಂತೆ ಮನೆಯಲ್ಲಿ ನೋಡಿಕೊಳ್ಳುವವರಿದ್ದಾರೆ. ಅದರ ಜೊತೆ ಆಟ, ಊಟ, ನಿದ್ದೆನೂ ಮಾಡ್ತಾರೆ. ಹಾಗೆಯೇ ಇದೀಗ ವೈರಲ್ ಆಗಿರುವ ವಿಡಿಯೋ ಕೂಡ ಇಂಥದ್ದೆ..

ಹೌದು, ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಬಾಲಕಿಯೊಬ್ಬಳು ಬೃಹತ್ ಕಪ್ಪು ಬಣ್ಣದ ಹೆಬ್ಬಾವಿನ ಜೊತೆ ಆಟವಾಡುತ್ತಿರುವುದನ್ನು ನೋಡಬಹುದು. ಈ ವಿಡಿಯೋ ಇನ್ಸ್ಟಾಗ್ರಾಂನಲ್ಲಿ 5.1 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡು, ಭಾರಿ ವೈರಲ್ ಆಗಿದೆ.

ಅರಿಯಾನಾ ಎಂಬ ಬಾಲಕಿಯು ಬೃಹತ್ ಗಾತ್ರದ ಹೆಬ್ಬಾವಿನ ಜೊತೆ ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಉರಗವು ತನ್ನ ಸುತ್ತಲೂ ನುಸುಳಿದಂತೆ ಆಕೆ ಉತ್ಸಾಹದಿಂದ ಆಟವಾಡಿದ್ದಾಳೆ. ಇನ್ಸ್ಟಾಗ್ರಾಂನ ಮತ್ತೊಂದು ಪೋಸ್ಟ್‌ನಲ್ಲಿ, ಬಾಲಕಿ ಸರೀಸೃಪದ ಪಕ್ಕದಲ್ಲಿ ಮಲಗಿರುವ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಈಕೆಗೆ ಹಾವುಗಳೆಂದ್ರೆ ಬಹಳ ಪ್ರೀತಿಯಂತೆ. ಹೀಗಾಗಿ ನಾಯಿ, ಬೆಕ್ಕುಗಳನ್ನು ಸಾಕುವಂತೆ ಹೆಬ್ಬಾವನ್ನು ಸಾಕುತ್ತಿದ್ದಾಳೆ.

ವೈರಲ್ ವಿಡಿಯೋ ನೋಡಿದ ಹಲವರು ಇಷ್ಟಪಟ್ಟಿದ್ದು, ಬಾಲಕಿಯನ್ನು ಧೈರ್ಯಶಾಲಿ ಎಂದು ಕರೆದಿದ್ದಾರೆ. ಇನ್ನೂ ಕೆಲವರು, ಇದು ಭಯಾನಕವಾಗಿದೆ. ಇದು ಸಾಕುಪ್ರಾಣಿ ಅಲ್ಲ ಹುಷಾರಾಗಿರಿ ಎಂದೆಲ್ಲಾ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...