alex Certify ಹೆಣ್ಣು ಮಗು ಜನಿಸಿದ್ದಕ್ಕೆ ಸಂಭ್ರಮ, ಹೆಲಿಕಾಪ್ಟರ್‌ ನಲ್ಲೇ ಮನೆಗೆ ಕರೆತಂದ ಹೆತ್ತವರು..!. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಣ್ಣು ಮಗು ಜನಿಸಿದ್ದಕ್ಕೆ ಸಂಭ್ರಮ, ಹೆಲಿಕಾಪ್ಟರ್‌ ನಲ್ಲೇ ಮನೆಗೆ ಕರೆತಂದ ಹೆತ್ತವರು..!.

ಗಂಡು ಮಗುವೇ ಬೇಕೆಂದು ಹಪಹಪಿಸುವವರು, ಹೆಣ್ಣು ಭ್ರೂಣ ಹತ್ಯೆಗೆ ಮುಂದಾಗುವವರು ಓದಲೇಬೇಕಾದ ಸುದ್ದಿ ಇದು. ಇದನ್ನು ಓದಿದ್ರೆ ಗಂಡು ಮಗು ಬೇಕೆಂಬ ಭ್ರಮೆ ದೂರವಾಗಬಹುದು. ಯಾಕಂದ್ರೆ ಹೆಣ್ಣು ಮಗು ಜನಿಸಿದ ಖುಷಿಯಲ್ಲಿ ಈ ಕುಟುಂಬ ಸಂಭ್ರಮಿಸಿದ ಪರಿ ಇಡೀ ಸಮಾಜದ ಕಣ್ಣು ತೆರೆಸುವಂತಿದೆ. ಇದೊಂದು ಅಪೂರ್ವವಾದ ಸತ್ಯ ಘಟನೆ.

ಮಹಾರಾಷ್ಟ್ರದ ಪುಣೆಯಲ್ಲಿ ನೆಲೆಸಿರೋ ಈ ಕುಟುಂಬದಲ್ಲಿ ಹೆಣ್ಣು ಮಗುವಿನ ಆಗಮನವಾಗಿದೆ. ನವಜಾತ ಕಂದಮ್ಮನನ್ನು ಮನೆಯವರು ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಿದ್ದಾರೆ. ಹೆಲಿಕಾಪ್ಟರ್‌ ಮೂಲಕ ಮಗಳನ್ನು ಮನೆಗೆ ಕರೆತಂದಿದ್ದಾರೆ.

ಇಡೀ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಪುಣೆಯ ಶೆಲ್ಗಾಂವ್‌ನ ಕುಟುಂಬ ಇದು. ಹೆಣ್ಣು ಮಗುವಿನ ಜನನವಾಗ್ತಿದ್ದಂತೆ ಹೆತ್ತವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಈ ಕ್ಷಣವನ್ನು ಸಂಭ್ರಮಿಸಲು ಕುಟುಂಬಸ್ಥರು ಹೆಲಿಕಾಪ್ಟರ್‌ ಅನ್ನು ಬಾಡಿಗೆಗೆ ಪಡೆದಿದ್ದಾರೆ. ಹೆಲಿಕಾಪ್ಟರ್‌ ನಲ್ಲೇ ಶಿಶುವನ್ನು ಕರೆತಂದಿದ್ದಾರೆ.

ಮಗುವನ್ನು ಹೊತ್ತ ಹೆಲಿಕಾಪ್ಟರ್ ಗ್ರಾಮಕ್ಕೆ ಬರ್ತಿದ್ದಂತೆ ಅದ್ಧೂರಿ ಸ್ವಾಗತ ಕೋರಲಾಯ್ತು. ಅವರ ಕುಟುಂಬದಲ್ಲಿ ಹೆಣ್ಣುಮಕ್ಕಳೇ ಇರಲಿಲ್ಲವಂತೆ. ಹಾಗಾಗಿ ಪುಟಾಣಿಯ ಆಗಮನದಿಂದ ಎಲ್ಲರೂ ಸಗಡರಪಟ್ಟಿರೋದಾಗಿ ತಂದೆ ವಿಶಾಲ್‌ ಜಾರೆಕರ್‌ ತಿಳಿಸಿದ್ದಾರೆ. ಮಗುವನ್ನು ಹೆಲಿಕಾಪ್ಟರ್‌ ನಲ್ಲಿ ಕರೆತರಲು 1 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...