ಬೆಂಗಳೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣ ದೇಶಾದ್ಯಂತ ಚರ್ಚೆಯಾಗುತ್ತಿದ್ದು, ಇಂತಹ ಘಟನೆಗಳು ನಡೆದಾಗ ಯುವತಿಯರದ್ದೇ ತಪ್ಪು ಎಂಬ ರೀತಿಯಲ್ಲಿ ಹಲವರು ಹೇಳಿಕೆಗಳನ್ನು ನೀಡುತ್ತಿರುವುದಕ್ಕೆ ಸ್ಯಾಂಡಲ್ ವುಡ್ ನಟಿ ರಮ್ಯಾ ಕಿಡಿಕಾರಿದ್ದಾರೆ.
ಅತ್ಯಾಚಾರಿಗಳಿಗೆ ಶಿಕ್ಷೆ ಕೊಡಿಸುವ ಬದಲಿಗೆ ಯುವತಿಯರದ್ದೇ ತಪ್ಪು ಎಂಬಂತೆ ಮಾತನಾಡುತ್ತಿರುವವರಿಗೆ ರಮ್ಯಾ ಛಿಮಾರಿ ಹಾಕಿದ್ದು, ಗಂಡಸರು ಮಹಿಳೆಯರ ಮೇಲೆ ಅಪರಾಧ ನಡೆಸಿದಾಗಲೆಲ್ಲ ಮಹಿಳೆಯರನ್ನೇ ದೂಷಿಸಲಾಗುತ್ತಿದೆ. ಅತ್ಯಾಚಾರ, ದೈಹಿಕ ದೌರ್ಜನ್ಯ, ಅಥವಾ ಮೌಖಿಕ ಶೋಷಣೆ ಏನೇ ಆಗಿರಬಹುದು… ಮಹಿಳೆಯರಿಗೆ ನಿನ್ನದೇ ತಪ್ಪು ಎಂದು ಹೇಳಲಾಗುತ್ತದೆ, ನೀನು ಹಾಗೆ ಹೇಳಬಾರದಿತ್ತು, ರಾತ್ರಿ ವೇಳೆ ಅಲ್ಲಿ ಹೋಗಬಾರದಿತ್ತು, ಅಂತಹ ಬಟ್ಟೆ ಹಾಕಬಾರದಿತ್ತು, ಕಣ್ಣು ಮಿಟುಕಿಸಬಾರದಿತ್ತು, ಕೆಂಪು ಲಿಪ್ ಸ್ಟಿಕ್ ಹಾಕಬಾರದಿತ್ತು ಹೀಗೆ ಮಹಿಳೆಯನ್ನೇ ದೂಷಿಸಲಾಗುತ್ತಿದೆ ಎಂದು ಗುಡುಗಿದ್ದಾರೆ.
ಪುಶ್-ಅಪ್ ಮಾಡಿ ಹಸೆಮಣೆ ಏರಿದ ವಧು – ವರ
ಮಹಿಳೆಯರು ಗಂಡಸರು ಇರುವುದೇ ಹಾಗೆ ಎಂಬ ಕಾರಣಕ್ಕೆ ರಾಜಿ ಆಗಬೇಕೆ? ನಾವೇ ಹೊಂದಿಕೊಳ್ಳಬೇಕು ಎಂಬ ಸ್ಥಿತಿಯಿದೆ. ಇಂಥ ಅಸಂಬದ್ಧಗಳು ಕೊನೆಯಾಗಬೇಕು…ನಾವು ಬದಲಾಗಬೇಕು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ದೂಷಣೆಗಳನ್ನು ಒಪ್ಪಿಕೊಳ್ಳುವ ತಪ್ಪನ್ನು ನಾನೂ ಮಾಡಿದ್ದೇನೆ. ಆದರೆ ಇನ್ಮುಂದೆ ಸಾಧ್ಯವಿಲ್ಲ. ಮಹಿಳೆಯರ ಮೇಲೆ ನಡೆಯುವ ಅಪರಾಧ ನೋಡಿಕೊಂಡು ಸುಮ್ಮನಿರಬೇಡಿ ಧ್ವನಿ ಎತ್ತಿ ಎಂದು ರಮ್ಯಾ ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಿದ್ದಾರೆ.